Saturday, July 25, 2026
Homeರಾಜ್ಯಕೊಡಗು : ಮಡಿಕೇರಿಯಲ್ಲಿ ಯುವ ಮಹಿಳಾ ಅರಣ್ಯಾಧಿಕಾರಿ ನೇಣಿಗೆ ಶರಣು.

ಕೊಡಗು : ಮಡಿಕೇರಿಯಲ್ಲಿ ಯುವ ಮಹಿಳಾ ಅರಣ್ಯಾಧಿಕಾರಿ ನೇಣಿಗೆ ಶರಣು.

ಕೊಡಗು: ಮಡಿಕೇರಿಯಲ್ಲಿ ಯುವ ಅರಣ್ಯಾಧಿಕಾರಿಯೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ರಶ್ಮಿ (27) ಎಂದು ಗುರುತಿಸಲಾಗಿದೆ.

ಮಂಡ್ಯ ಮೂಲದ ರಶ್ಮಿ ಮಡಿಕೇರಿಯ ಅರಣ್ಯ ಇಲಾಖೆಯ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಡಗಿನಲ್ಲಿ ಎರಡು ವರ್ಷಗಳಿಂದ ಡಿಆರ್‌ಎಫ್‌ಒ ಆಗಿ ಸೇವೆ ಸಲ್ಲಿಸುತ್ತಿದ್ದರು. ಪೊಲೀಸರು ಭೇಟಿ‌ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಅಧಿಕಾರಿ ನಿನ್ನೆ ರಾತ್ರಿಯೇ ಆತ್ಮಹತ್ಯೆ‌ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular