Monday, May 18, 2026
Flats for sale
Homeಜಿಲ್ಲೆಕೊಡಗು : ದುಬಾರೆ ಆನೆ ಶಿಬಿರದಲ್ಲಿ ದುರಂತ, ಪತ್ನಿಯ ಸಾವಿನಲ್ಲೂ ಮಾನವೀಯತೆ : ನೇತ್ರದಾನ ಮಾಡಿದ...

ಕೊಡಗು : ದುಬಾರೆ ಆನೆ ಶಿಬಿರದಲ್ಲಿ ದುರಂತ, ಪತ್ನಿಯ ಸಾವಿನಲ್ಲೂ ಮಾನವೀಯತೆ : ನೇತ್ರದಾನ ಮಾಡಿದ ಪತಿ ಜೋಯಲ್.

ಕೊಡಗು : ದುಬಾರೆ ಆನೆ ಶಿಬಿರದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟ ತಮಿಳುನಾಡಿನ ಪ್ರವಾಸಿ ಮಹಿಳೆ ಜೋನ್ಸಿಯ ನೇತ್ರದಾನ ಮಾಡುವ ಮೂಲಕ ಪತಿ ಜೋಯಲ್ ಮಾನವೀಯತೆ ಮೆರೆದಿದ್ದಾರೆ.

ಪತ್ನಿಯ ಸಾವಿನ ನೋವಿನ ನಡುವೆಯೂ ಮತ್ತೊಬ್ಬರ ಬದುಕಿಗೆ ಬೆಳಕು ನೀಡುವ ನಿರ್ಧಾರ ಕೈಗೊಂಡ ಜೋಯಲ್ ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಸ್ನಾನ ಮಾಡಿಸುವ ಸಂದರ್ಭ ಸಂಭವಿಸಿದ ಅವಘಡದಲ್ಲಿ ಜೋನ್ಸಿ ಮೃತಪಟ್ಟಿದ್ದರು. ಬಳಿಕ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ನೇತ್ರದಾನ ಪ್ರಕ್ರಿಯೆ ನೆರವೇರಿಸಲಾಯಿತು.
ಮೃತಳ ನೇತ್ರದಾನದಿಂದ ಇಬ್ಬರ ಬದುಕಿಗೆ ಹೊಸ ಬೆಳಕು ಸಿಗಲಿದ್ದು, ಕುಟುಂಬದ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular