ಕುಂದಾಪುರ : ದೋಣಿಯಿಂದ ಮೀನು ಇಳಿಸುತ್ತಿದ್ದ ಮೀನುಗಾರರೊಬ್ಬರು ಗಂಗೊಳ್ಳಿಯಲ್ಲಿ ಪಂಚ ಗಂಗಾವಳಿ ನದಿಗೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಒರಿಸ್ಸಾ ಮೂಲದ ಪ್ರಮೋದ್ ಮಿಂಜ್ (32) ಎಂದು ಗುರುತಿಸಲಾಗಿದೆ.
ಪ್ರಭಾಕರ ಖಾರ್ವಿ ಮಾಲೀಕತ್ವದ ಶ್ರೀ ಯಕ್ಷೇಶ್ವರಿ ದೋಣಿಯಲ್ಲಿ ಆನಂದ ತರಕ್ಕಿ, ಪ್ರಮೋದ ಮಿನ್ನಾ, ಪ್ರಮೋದ ತೋಪು ಮತ್ತಿತರರು ಮಂಗಳವಾರ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ಮತ್ತೆ ಪಂಚಗಂಗಾವಳಿ ನದಿಗೆ ಬಂದು ಮೀನು ಖಾಲಿ ಮಾಡುತ್ತಿದ್ದ ವೇಳೆ ಪ್ರಮೋದ್ ಮಿಂಜ್ ದೋಣಿಯಿಂದ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.