Sunday, February 1, 2026
Flats for sale
Homeವಿದೇಶಕರಾಚಿ : 14 ವರ್ಷಗಳ ಬಳಿಕ ಬಾಂಗ್ಲಾ ಪಾಕ್ ಮಧ್ಯೆ ನೇರವಿಮಾನಯಾನ ಆರಂಭ.

ಕರಾಚಿ : 14 ವರ್ಷಗಳ ಬಳಿಕ ಬಾಂಗ್ಲಾ ಪಾಕ್ ಮಧ್ಯೆ ನೇರವಿಮಾನಯಾನ ಆರಂಭ.

ಕರಾಚಿ : ಒಂದು ದಶಕದ ಬಳಿಕ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮಧ್ಯೆ ಜನವರಿ 29 ರಿಂದ ನೇರವಿಮಾನಯಾನ ಆರಂಭವಾಗಿದೆ. ಬಾಂಗ್ಲಾದೇಶದ ಸರ್ಕಾರಿ ಸ್ವಾಮ್ಯದ ಬಿಮನ್ ಏರ್ಲೈನ್ಸ್ ವಿಮಾನ ಜಿ-341 ಢಾಕಾದಿಂದ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುರುವಾರ ರಾತ್ರಿ 11 ಗಂಟೆಗೆ ತಲುಪಲಿದೆ. ಇದು 2012 ರ ಬಳಿಕ ಪಾಕಿಸ್ತಾನಕ್ಕೆ ತೆರಳುತ್ತಿರುವ ಮೊದಲ ವಿಮಾನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ಬಳಿಕ ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕ ಸಂಬAಧ ವೃದ್ಧಿಸುವ ಪಯತ್ನಗಳು ನಡೆಯುತ್ತಿವೆ. ಅದರ ಭಾಗವಾಗಿಯೇ ನೇರವಿಮಾನಯಾನ ಸಂಪರ್ಕ ಪುನರಾರAಭಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾದ ಏರ್‌ಪೋರ್ಟ್ ಅಧಿಕಾರಿಗಳ ಪ್ರಕಾರ, ಢಾಕಾದಿಂದ ರಾತ್ರಿ 8 ಗಂಟೆಗೆ ಹೊರಡುವ ವಿಮಾನ ರಾತ್ರಿ 11 ಗಂಟೆಗೆ ಪಾಕಿಸ್ತಾನ ತಲುಪುತ್ತದೆ. ವಾರದಲ್ಲಿ ಎರಡು ದಿನ ಅಂದರೆ ಗುರುವಾರ ಮತ್ತು ಶನಿವಾರ ಕಾರ್ಯಾಚರಣೆ ನಡೆಸಲಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷದಿಂದಲೂ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸರ್ಕಾರ ವ್ಯಾಪಾರ ವೃದ್ಧಿ ಸೇರಿದಂತೆ ಉತ್ತಮ ರಾಜತಾಂತ್ರಿಕ ಸಂಬAಧ ಹೊಂದುವನಿಟ್ಟಿನಲ್ಲಿ ನಿರಂತರ ಮಾತುಕತೆ ನಡೆಸುತ್ತಿದ್ದವು. ಇದೇ ವೇಳೆಯಲ್ಲಿ ಎರಡೂ ದೇಶಗಳ ಮಧ್ಯೆ ಸ್ಥಗಿತಗೊಂಡಿದ್ದ ನೇರವಿಮಾನಯಾನ ಮತ್ತೆ ಆರಂಭಿಸುವ ಚಿAತನೆಯೂ ನಡೆದಿತ್ತು. ಇದೀಗ ನೇರವಿಮಾನಯಾನ ಪುನರಾರಂಭವಾಗಿತ್ತು. ಉಭಯ ದೇಶಗಳ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular