Thursday, July 23, 2026
Homeವಿದೇಶಕಠ್ಮಂಡು : ಟೇಕಾಫ್ ವೇಳೆ ರನ್‌ವೇಯಿಂದ ಜಾರಿ ವಿಮಾನ ಪತನ; 18 ಮಂದಿ ಸಾವು; ಪೈಲಟ್...

ಕಠ್ಮಂಡು : ಟೇಕಾಫ್ ವೇಳೆ ರನ್‌ವೇಯಿಂದ ಜಾರಿ ವಿಮಾನ ಪತನ; 18 ಮಂದಿ ಸಾವು; ಪೈಲಟ್ ಪ್ರಾಣಾಪಾಯದಿಂದ ಪಾರು.

ಕಠ್ಮಂಡು : ಜುಲೈ 24 ರಂದು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ 19 ಜನರಿದ್ದ ಸಿಆರ್‌ಜೆ 200 ಜೆಟ್‌ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡುವ ವೇಳೆ ರನ್‌ವೇಯಿಂದ ಜಾರಿಬಿದ್ದು ಪತನಗೊಂಡು 18 ಪ್ರಯಾಣಿಕರು ಸಾವನ್ನಪ್ಪಿದ ಘಟನೆ ನಡೆದಿದೆ.

ವಿಮಾನದ ಪೈಲಟ್ ಅಪಘಾತದಲ್ಲಿ ಬದುಕುಳಿದರು ಮತ್ತು ಚಿಕಿತ್ಸೆಗಾಗಿ ಕಠ್ಮಂಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.19 ಜನರಿದ್ದು – ಇಬ್ಬರು ಸಿಬ್ಬಂದಿ ಮತ್ತು 17 ಸಿಬ್ಬಂದಿ – ಅವರಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ಪೈಲಟ್ ಆಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ಇನ್ನೂ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಸೌರ್ಯ ಏರ್‌ಲೈನ್ಸ್ ವಿಮಾನವು ಕಠ್ಮಂಡುವಿನಿಂದ ರೆಸಾರ್ಟ್ ಟೌನ್ ಪೊಖರಾಗೆ ತೆರಳುತ್ತಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular