ಉಳ್ಳಾಲ : ರಾ.ಹೆ.66 ರ ಕಲ್ಲಾಪಿನಲ್ಲಿರುವ ವಾಣಿಜ್ಯ ಕಟ್ಟಡದ ಚಿಮಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ,ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಐದನೇ ಮಹಡಿಯೇರಿ ಹರಸಾಹಸ ಪಟ್ಟು ಬೆಂಕಿಯನ್ನ ನಂದಿಸಿದ್ದಾರೆ.ಫೈರ್ ಸೇಪ್ಟಿನು ಇಟ್ಕೊಳ್ಳದೆ ನಿಯಮ ಮೀರಿ ಕಾರ್ಯಾಚರಿಸುತ್ತಿರುವ ಕಟ್ಟಡದ ವಿರುದ್ದ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಲ್ಲಾಪಿನಲ್ಲಿರುವ ಕಿಯಾಂಝ ಯುನಿವರ್ಸಲ್ ವಾಣಿಜ್ಯ ಕಟ್ಟಡದಲ್ಲಿರುವ ಮನ್ಹಾಸ್ ಮಂದಿ ಹೊಟೇಲ್ನ ಹೊಗೆ ಹೊರಸೂಸುವ ಚಿಮಣಿಯ ತುದಿಯಲ್ಲಿ ಇಂದು ಬೆಳಿಗ್ಗೆ ಬೆಂಕಿ ಹತ್ತಿಕೊಂಡಿತ್ತು.ಸ್ಥಳೀಯರು, ಕಟ್ಟಡದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದರೂ ಬೆಂಕಿ ವ್ಯಾಪಿಸತೊಡಗಿತ್ತು.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಕಟ್ಟಡದ ಐದನೇ ಮಹಡಿಯೇರಿ ಚಿಮಣಿಯಲ್ಲಿ ಹತ್ತಿಕೊಂಡ ಬೆಂಕಿಯನ್ನ ನಂದಿಸಿದ್ದಾರೆ.ಅಗ್ನಿ ಶಾಮಕ ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಸಂಭವನೀಯ ದೊಡ್ಡ ಬೆಂಕಿ ಅವಘಡವೊಂದು ತಪ್ಪಿದಂತಾಗಿದೆ.ಕಟ್ಟಡದ ತುದಿಯ ಗೋಡೆ ಅಂಚಲ್ಲಿ ಸಾಹಸ ಮೆರೆದು ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿಗಳನ್ನು ಸ್ಥಳೀಯರು ಪ್ರಶಂಸಿದ್ದಾರೆ.
ಅಗ್ನಿ ಶಾಮಕದ ವಾಹನ ಕಟ್ಟಡವನ್ನು ಸುತ್ತಲೂ ಸ್ಥಳಾವಕಾಶ ನೀಡದೆ,ಸೆಟ್ ಬ್ಯಾಕ್ ಬಿಡದೆ ಕನಿಷ್ಟ ಫೈರ್ ಸೇಪ್ಟಿ ಪರಿಕರಗಳನ್ನೂ ಅಳವಡಿಸದ ಈ ವಾಣಿಜ್ಯ ಕಟ್ಟಡಕ್ಕೆ ಪರವಾನಿಗೆ ಕೊಟ್ಟವರಾದರೂ ಯಾರು..? ಇಂತಹ ನಿಯಮ ಬಾಹಿರ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.