Thursday, March 27, 2025
Flats for sale
Homeಜಿಲ್ಲೆಉಳ್ಳಾಲ ; ಬೋಳದಲ್ಲಿ ಪ್ರಥಮ‌ ವರ್ಷದ ಲವ-ಕುಶ ಜೋಡುಕರೆ ಹೊನಲು‌ ಬೆಳಕಿನ "ನರಿಂಗಾನ‌ ಕಂಬಳೋತ್ಸವ"...

ಉಳ್ಳಾಲ ; ಬೋಳದಲ್ಲಿ ಪ್ರಥಮ‌ ವರ್ಷದ ಲವ-ಕುಶ ಜೋಡುಕರೆ ಹೊನಲು‌ ಬೆಳಕಿನ “ನರಿಂಗಾನ‌ ಕಂಬಳೋತ್ಸವ” ಸಮಾರೋಪ.

ಉಳ್ಳಾಲ ; ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಮೋರ್ಲ ಬೋಳದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪ್ರಥಮ‌ ವರ್ಷದ ಲವ-ಕುಶ ಜೋಡುಕರೆ ಹೊನಲು‌ ಬೆಳಕಿನ “ನರಿಂಗಾನ‌ ಕಂಬಳೋತ್ಸವ” ಭಾನುವಾರ ಸಂಜೆ ಸಮಾರೋಪಗೊಂಡಿತು.
ಉಳ್ಳಾಲ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಕಂಬಳ ಆಯೋಜನೆ ಮಾಡಲಾಗಿದ್ದು ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ಲವ-ಕುಶ ಜೋಡುಕರೆ ಹೆಸರಿನಲ್ಲಿ ನರಿಂಗಾನ ಕಂಬಳೋತ್ಸವ ಶನಿವಾರ ಬೆಳಗ್ಗೆ ಉದ್ಘಾಟನೆಗೊಂಡಿತ್ತು.

ಶಾಸಕ ಯು.ಟಿ. ಖಾದರ್ ಅಧ್ಯಕ್ಷತೆಯ ಕಂಬಳ ಸಮಿತಿಯ ಆಶ್ರಯದಲ್ಲಿ ಲವ ಕುಶ ಕಂಬಳ ಕರೆಯಲ್ಲಿ ವಿವಿಧ ವಿಭಾಗದಲ್ಲಿ ನಡೆದ ಸ್ಪರ್ಧೆಯ ಫಲಿತಾಂಶ:

ನರಿಂಗಾನ ಕಂಬಳ ಮೊದಲ‌ ಬಾರಿ ನಡೆದರೂ 187ಜೊತೆ ಕೋಣಗಳು ಸ್ಪರ್ಧಿಸಿತ್ತು.

ಕನೆಹಲಗೆ: 05 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 20 ಜೊತೆ
ನೇಗಿಲು ಹಿರಿಯ: 26 ಜೊತೆ
ಹಗ್ಗ ಕಿರಿಯ: 24 ಜೊತೆ
ನೇಗಿಲು ಕಿರಿಯ: 45 ಜೊತೆ
ಸಬ್ ಜೂನಿಯರ್ ನೇಗಿಲು: 61
ಒಟ್ಟು ಕೋಣಗಳ ಸಂಖ್ಯೆ: 187 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
ಕೋಣದ ಯಜಮಾನರು: ಬೋಳಾರ ತ್ರಿಶಾಲ್ ಕೆ ಪೂಜಾರಿ.
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ.
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಯಜಮಾನರು: ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಅಡ್ಡ ಹಲಗೆ:
ಪ್ರಥಮ: ಬೋಳಾರ ತ್ರಿಶಾಲ್ ಕೆ.ಪೂಜಾರಿ.
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ.

ದ್ವಿತೀಯ: ಪೆರಿಯಾವುಗುತ್ತು ನವೀನ್ ಚಂದ್ರ ಗಟ್ಟಿಯಾಳ್.
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್.

ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ”
ಓಡಿಸಿದವರು: ಕಾವೂರು ದೋಟ ಸುದರ್ಶನ್.

ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ “ಎ”
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್.

ಹಗ್ಗ ಕಿರಿಯ:
ಪ್ರಥಮ: ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ಕೌಶಿಕ್ ದಿನಕರ್ ಶೆಟ್ಟಿ.
ಓಡಿಸಿದವರು: ಕಾವೂರು ದೋಟ ಸುದರ್ಶನ್.

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ನಾರಾಯಣ ಭಂಡಾರಿ “ಎ”
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.

ನೇಗಿಲು ಹಿರಿಯ:
ಪ್ರಥಮ: ಬೆಳ್ಳಿಪ್ಪಾಡಿ ಕೈಪ ಶಿವಯ್ಯ ಮಂಕು ಭಂಡಾರಿ “ಎ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.
ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಬಾಬು ವೆಂಕಪ್ಪ ಗೌಡ.
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.

ನೇಗಿಲು ಕಿರಿಯ:
ಪ್ರಥಮ: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ್ ವಿ ಕೋಟ್ಯಾನ್.
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.
ದ್ವಿತೀಯ: ಪಣೋಳಿಬೈಲು ಬೊಳ್ಳಾಯಿ ಚೇತನ್ ಚಂದಪ್ಪ ಪೂಜಾರಿ.
ಓಡಿಸಿದವರು: ಒಂಟಿಕಟ್ಟೆ ರಿತೇಶ್ ಪೂಜಾರಿ.

ಸಬ್ ಜೂನಿಯರ್ ನೇಗಿಲು:
ಪ್ರಥಮ: ಮಂದಾರ್ತಿ ಶೀರೂರು ಮುದ್ದುಮನೆ ಗೋಪಾಲ ನಾಯ್ಕ್.
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್.

ದ್ವಿತೀಯ: ಅಂಬ್ಲಮೊಗರು ಕೋಟ್ರಗುತ್ತು ಅಘನ್ಯ ನಿಖಿಲ್ ಕೊಟ್ಟಾರಿ.
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್.
ಕಂಬಳ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿಯ ಸಂಚಾಲಕರು,ಪ್ರಮುಖರ ಉಪಸ್ಥಿತಿಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular