ಉಳ್ಳಾಲ ; ಉಳ್ಳಾಲದ ಸೀ ಗ್ರೌಂಡಲ್ಲಿ ನಡೆಯುತ್ತಿರುವ ಉಳ್ಳಾಲ ಪ್ರೀಮಿಯರ್ ಲೀಗ್ (UPL) ಓವರ್ ಆರ್ಮ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿರುವ ಉಳ್ಳಾಲ ಪತ್ರಕರ್ತರ ತಂಡದ ಜರ್ಸಿ( ಸಮವಸ್ತ್ರ) ಅನಾವರಣ ಕಾರ್ಯಕ್ರಮ ಗುರುವಾರ ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಅನ್ವಿತ್ ಇಲೆಕ್ಟ್ರಾನಿಕ್ಸ್ ಮಾಲಕರಾದ ಪ್ರಕಾಶ್ ಅವರು ಜೆರ್ಸಿ ಅನಾವರಣಗೊಳಿಸಿದರು.ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾದ ಯು.ಬಿ ಸಲೀಂ ಅವರು ಮಾತನಾಡಿ ಈ ಹಿಂದೆ ಜನಸ್ನೇಹಿ ವ್ಯವಸ್ಥೆ ವೃದ್ಧಿಗಾಗಿ ಪೊಲೀಸರ ತಂಡವನ್ನ ಯುಪಿಎಲ್ ನಲ್ಲಿ ಔಪಚಾರಿಕವಾಗಿ ಆಟವಾಡಲು ಅವಕಾಶ ನೀಡಿದ್ದೆವು. ಈ ಬಾರಿ ಪತ್ರಕರ್ತರು ಮತ್ತು ಶಾಸಕರ ತಂಡಕ್ಕೂ ಅವಕಾಶ ನೀಡಲಾಗಿದೆ ಎಂದರು.
ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಸಂತ್ ಎನ್.ಕೊಣಾಜೆ ಅವರು ಪ್ರಕಾಶ್ ಮತ್ತು ಯು.ಬಿ ಸಲೀಂ ಅವರನ್ನ ಅಭಿನಂದಿಸಿದರು.ಉಪಾಧ್ಯಕ್ಷರಾದ ದಿನೇಶ್ ನಾಯಕ್ ,ಆರೀಫ್ ಕಲ್ಕಟ್ಟ, ಕಾರ್ಯದರ್ಶಿಗಳಾದ ಡಾ.ಸತೀಶ್ ಕೊಣಾಜೆ, ವಜ್ರ ಗುಜರನ್ ,ಪತ್ರಕರ್ತರಾದ ಅಸೀಫ್ ಬಬ್ಬುಕಟ್ಟೆ,ಅಶ್ವಿನ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.