ಉದಯಪುರ: ನಟಿ ಪರಿಣೀತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಾರ್ಟಿ ನಾಯಕ ರಾಘವ್ ಛಡ್ಡಾ ಅವರ ವಿವಾಹ ಮಹೋತ್ಸವವು ಭಾನುವಾರ ಜೈಪುರದ ಲೀಲಾ ಪ್ಯಾಲೇಸ್ ಹೋಟೆಲಿನಲ್ಲಿ ಅದ್ದೂರಿಯಾಗಿ ನೆರವೇರಿದೆ.
ವಿವಾಹ ಮಹೋತ್ಸವದ ಮೊದಲ ಪೋಟೋಗಳನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಉಪಾಹಾರದ ಟೇಬಲ್ನಲ್ಲಿ ಮೊದಲ ಬಾರಿ ಸಂಭಾಷಣೆ ನಡೆದಾಗಲೇ ನಮ್ಮ ಹೃದಯಗಳು ಅರಳಿದವು. ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವು. ಈಗ ಶ್ರೀ ಹಾಗೂ ಶ್ರೀಮತಿ ಎಂದು ಅನುಗ್ರಹಿಸಲ್ಪಟ್ಟಿದ್ದೇವೆ. ಇನ್ನು ಪರಸ್ಪರರಿಲ್ಲದೆ ಬದುಕುವುದು ಅಸಾಧ್ಯ. ನಮ್ಮ ವೈವಾಹಿಕ ಜೀವನದ ಶುಭಾರಂಭ ಆಗಿದೆ ‘ಎಂಬುದಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಟೋಗಳಿಗೆ ಕ್ಯಾಪ್ಷನ್ ಬರೆಯಲಾಗಿದೆ.
ಮದುವೆ ಸಮಯದಲ್ಲಿ ಪರಿಣೀತಿ ಅವರು ಬಹಳ ಅಲಂಕಾರಿಕ ಐವೊರಿ ಲೆಹಂಗಾ ಮತ್ತು ಅದಕ್ಕೆ ಸರಿಯಾದ ವೇಲ್ ಧರಿಸಿದ್ದರು. ಈ ಉಡುಪಿನಲ್ಲಿ ರಾಘವ ಎಂಬುದನ್ನು ಬಂಗಾರದ ಬಣ್ಣದಲ್ಲಿ ಹಿಂದಿಯಲ್ಲಿ ಬರೆಯಲಾಗಿತ್ತು. ಅಲ್ಲದೆ, ಅಪೂರ್ವ ಹರಳಿನ ಚಿನ್ನಾಭರಣಗಳನ್ನು ಮೈಮೇಲೆ ಧರಿಸಿದ್ದರು. ಇದೇ ವೇಳೆ ರಾಘವ ಅವರು ಐವೊರಿ ಶೆರ್ವಾನಿ ಹಾಗೂ ಸಫಾ ಧರಿಸಿ ನಟಿ ಪರಿಣೀತಿಗೆ ಸರಿಯಾದ ಜೋಡಿಯೆನಿಸಿದ್ದರು.