Thursday, July 23, 2026
Homeಜಿಲ್ಲೆಉಡುಪಿ : ಖಾಸಗಿ ಬಸ್ ಕಂಡಕ್ಟರ್​ಗಳ ನಡುವೆ ಮಾರಾಮಾರಿ : ವಿಡಿಯೋ ವೈರಲ್​.

ಉಡುಪಿ : ಖಾಸಗಿ ಬಸ್ ಕಂಡಕ್ಟರ್​ಗಳ ನಡುವೆ ಮಾರಾಮಾರಿ : ವಿಡಿಯೋ ವೈರಲ್​.

ಉಡುಪಿ : ದಕ್ಷಿಣ ಕನ್ನಡ,ಉಡುಪಿ ಉಡುಪಿ ಜಿಲ್ಲೆಯಲ್ಲಿ ಟೈಮಿಂಗ್ ವಿಚಾರದಲ್ಲಿ ಗಲಾಟೆ ನಡೆಯೋದು ಸಹಜ ಆದರೆ ಇಲ್ಲಿ ಮಹಿಳೆ ಕಂಡಕ್ಟರ್ ಹಾಗೂ ಪುರುಷ ಕಂಡಕ್ಟರ್ ನಡುವೆ ಗಲಾಟೆ ನಡೆದಿದ್ದು ಇಬ್ಬರು ಮೈ ಕೈ ಅಂತ ಗಲಾಟೆಮಾಡಿಕೊಂಡಿದ್ದು ಮೊದಲ ಬಾರಿ ಎಂಬುದು ತಿಳಿದುಬಂದಿದೆ

ಕಂಡಕ್ಟರ್​ಗಳ ಹೊಡೆದಾಟದ ದೃಶ್ಯ ಬಸ್ಸಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಗಿಂತ ಬೇಗ ಬಂದು ಬಸ್ಸು ನಿಲ್ಲಿಸಿದ್ದಕ್ಕೆ ಲೇಡಿ ಕಂಡಕ್ಟರ್ ರೇಖಾ ಎಂಬುವವರು ಮತ್ತೋರ್ವ ಖಾಸಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಕಂಡಕ್ಟರ್ ರೌದ್ರಾವತಾರ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ.

ಘಟನೆ ನಂತರ ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಪೂರ್ಣ ಗಲಾಟೆ ದುರ್ಗಾಪ್ರಸಾದ್ ಬಸ್ಸಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರೇಖಾ ಅವರು ಉಡುಪಿಯ ಮೊದಲ ಮಹಿಳಾ ಬಸ್ ಕಂಡಕ್ಟರ್ ಎಂದು ಗುರುತಿಸಿಕೊಂಡರು ಮತ್ತು ಹಲವಾರು ವರ್ಷಗಳಿಂದ ಭಾರತಿ ಮೋಟಾರ್ಸ್ ಬಸ್‌ನಲ್ಲಿ ಉಡುಪಿ ಮತ್ತು ಕುಂದಾಪುರ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular