ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ 400 ಜನರಿದ್ದ ರೈಲೊಂದನ್ನು ಬಲೋಚ್ ಲಿಬರಲ್ ಆರ್ಮಿಯ ಉಗ್ರರು ಅಪಹರಿಸಿದ್ದು, ಅದರಲ್ಲಿದ್ದ ಸುಮಾರು 182 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡಿದೆ.
ಪಾಕಿಸ್ತಾನಕ್ಕೆ, ವಿಷೇಷವಾಗಿ ಬಲೋಚಿಸ್ತಾನಕ್ಕೆ ಅಮೆರಿಕದ ಪ್ರಜೆಗಳು ಹೋಗದಂತೆ ಅಧ್ಯಕ್ಷ ಟ್ರಂಪ್ ಎಚ್ಚರಿಕೆ ಹೊರಡಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಜರುಗಿದೆ. ಜಾಫರ್ ಎಕ್ಸ್ಪ್ರೆಸ್ ಹೆಸರಿನ ರೈಲು ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿತ್ತು. ದಾರಿ ಮಧ್ಯೆ ಬಲೋಚಿಸ್ತಾನದ ಬೋಲನ್ ಜಿಲ್ಲೆಯಲ್ಲಿ ಸುರಂಗವೊಂದರ ಬಳಿ ಅದರ ಕಡೆಗೆ ಗುಂಡು ಹಾರಿಸಿದ ಉಗ್ರರು, ರೈಲನ್ನು ನಿಲ್ಲಿಸಿ, ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಯಾರಾದರೂ ಮೃತಪಟ್ಟಿದ್ದಾರೆಯೇ ಎನ್ನುವುದು ಇನ್ನೂ ಖಚಿತಗೊಂಡಿಲ್ಲ ಎಂದು ಬಲೋಚಿಸ್ತಾನ ಸರ್ಕಾರದ ವಕ್ತಾರರು ತಿಳಿಸಿದೆ. ಆದರೆ 20 ಯೋಧರನ್ನು ಹತ್ಯೆಮಾಡಿರುವುದಾಗಿ ಮತ್ತು 182 ಪ್ರಯಾಣಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವುದಾಗಿ ಬಲೋಚ್ ಲಿಬರಲ್ ಆರ್ಮಿಯೇ ಹೇಳೆಕೊಂಡಿದೆ.
ಉಗ್ರರಿಗೆ ಆಶ್ರಯ ನೀಡಿದ್ದ ಪಾಕಿಸ್ತಾನದ ಮೇಲೆಯೇ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ. ನವೆಂಬರ್ ೨೦೨೪ರಲ್ಲಿ ಕ್ವೆಟ್ಟಾ ರೈಲ್ವೇ ಸ್ಟೇಷನ್‌ನಲ್ಲಿ ಸಂಭವಿಸಿದ ಸ್ಫೋಟದಿಂದ ೨೬ ಜನ ಮೃತಪಟ್ಟು ೬೨ ಜನ ಗಾಯಗೊಂಡಿದ್ದರು. ೨೦೨೪ರಲ್ಲಿ ಉಗ್ರರ ದಾಳಿಗಳು ೨೦೧೪ರ ನಂತರ ಹೆಚ್ಚು ಸಂಭವಿಸಿದೆ ಎಂದು ಪಾಕ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಸ್ಟಡೀಸ್ ವರದಿ ಮಾಡಿತ್ತು