Thursday, March 12, 2026
Flats for sale
Homeಕ್ರೈಂಹೊಸನಗರ ; ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 150 ಟನ್ ಮರಳು ವಶ.

ಹೊಸನಗರ ; ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 150 ಟನ್ ಮರಳು ವಶ.

ಹೊಸನಗರ: ತಾಲೂಕಿನ ಪುರಪ್ಪೇಮನೆ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 150 ಟನ್ ಮರಳನ್ನು ಪೊಲೀಸ್ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪುರಪ್ಪೆಮನೆಯ ನದಿ ತೀರದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದಾರೆ.

ಹೊಸನಗರ ಸಿಪಿಐ ಗುರಣ್ಣ ಎಸ್, ಹೆಬ್ಬಾಳ್, ಪಿಎಸ್ಐ ಶಿವಾನಂದ‌ ವೈ.ಕೆ, ಶಿವಮೊಗ್ಗ ಗಣಿ‌ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರಿಯಾ ನೇತೃತ್ವದಲ್ಲಿ ಜಂಟಿ‌ ಕಾರ್ಯಾಚರಣೆ ನಡೆಸಿ 150 ಟನ್ ಅಕ್ರಮ ಮರಳನ್ನು ವಶಪಡಿಸಿ‌ಕೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular