ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಾಲ್ಲಾಳ ಗ್ರಾಮದಲ್ಲಿ ನಾಡ ಬಾಂಬ್ ಸ್ಪೋಟಗೊಂಡು ಮಗ ಸಾವನ್ನಪ್ಪಿದ್ದು ತಂದೆಯ ಸ್ಥಿತಿ ಗಂಭೀರವಾದಂತಹ ಘಟನೆ ನಡೆದಿದೆ.
ಮೃತ ಯುವಕ ಪವನ್ (೧೯) ಎಂದು ಗುರುತಿಸಲಾಗಿದೆ.ಪವನ್ ತಂದೆಯ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ವಾವಣಿ ಛಿದ್ರ ಛಿದ್ರವಾಗಿದ್ದು ಕಾಡು ಪ್ರಾಣಿಗಳ ಬೇಟೆಗಾಗಿ ನಾಡಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಟೋಟವಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ .


