Thursday, March 12, 2026
Flats for sale
Homeದೇಶಹೈದರಾಬಾದ್ : ಮದ್ಯ ಕದಿಯಲು ಬಂದ ಖದೀಮ ಫುಲ್ ಟೈಟ್,ಗೊರಕೆ ಹೊಡೆಯುತ್ತಲೇ ನಶೆಯಲ್ಲಿ ಗಾಢ ನಿದ್ರೆ...

ಹೈದರಾಬಾದ್ : ಮದ್ಯ ಕದಿಯಲು ಬಂದ ಖದೀಮ ಫುಲ್ ಟೈಟ್,ಗೊರಕೆ ಹೊಡೆಯುತ್ತಲೇ ನಶೆಯಲ್ಲಿ ಗಾಢ ನಿದ್ರೆ ..!

ಹೈದರಾಬಾದ್ : ಮದ್ಯ ಕದಿಯಲು ಬಂದ ಖದೀಮ ಫುಲ್ ಟೈಟ್ ಆಗಿ ಬಿದ್ದು ಅಲ್ಲೇ ನಿದ್ರೆಗೆ ಜಾರಿದ ಘಟನೆ ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ನಡೆದಿದೆ.

ಕುಡಿದು ಅಲ್ಲೇ ಬಿದ್ದು ಮಲಗಿದ ಕಳ್ಳನನ್ನು ಕನಕದುರ್ಗ ಎಂದು ತಿಳಿದಿದೆ ಈತ ರಾತ್ರಿ ಮದ್ಯದಂಗಡಿಗೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ಅಲ್ಲಿಗೆ ಹೋದ ನಂತರ ಆತನ ಲಕ್ಷ್ಯವೆಲ್ಲಾ ಮದ್ಯದ ಬಾಟೆಲ್‌ ಮೇಲೆ ಹೋಗಿದೆ. ಕಳ್ಳತನಕ್ಕೆ ಬಂದವ ಮೊದಲು ಒಂದು ಬಿಯರ್ ಬಾಟೆಲ್ ಓಪನ್ ಮಾಡಿ ಕುಡಿದಿದ್ದಾನೆ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಕನಕದುರ್ಗ, ಬೇರೆ ಬೇರೆಯ ಬ್ರ್ಯಾಂಡ್ ಬಾಟೆಲ್ ಓಪನ್ ಮಾಡಿ ಮದ್ಯ ಕುಡಿದಿದ್ದಾನೆ. ಕುಡಿದ ನಶೆಯಲ್ಲಿ ಅಲ್ಲೇ ಮಲಗಿದ್ದಾನೆ.

ಮೇಲ್ಛಾವಣಿಯ ಮೆಟ್ಟಿಲುಗಳಿಂದ ಇಳಿದು ಬಾರ್‌ ಒಳಗೆ ಬಂದ ಕಳ್ಳ ಮೊದಲು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾನೆ. ನಂತರ ಅಲ್ಲಿದ್ದ ಹಣ ಮತ್ತು ನಾಲ್ಕೈದು ಮದ್ಯದ ಬಾಟೆಲ್ ಎತ್ತುಕೊಂಡಿದ್ದಾನೆ. ಆದ್ರೆ ಅಲ್ಲಿಂದ ಹೋಗದೇ ಅಲ್ಲಿಯೇ ಕುಳಿತು ಕುಡಿಯಲು ಆರಂಭಿಸಿದ್ದಾನೆ. ಅಂಗಡಿಯಿಂದ ಹೊರಗೆ ಹೋಗಲಾರದಷ್ಟು ಕುಡಿದು ನಿದ್ದೆ ಮಾಡಿದ್ದಾನೆ.

ಕಳ್ಳ ಅಲ್ಲಿದ್ದ ಹಣ ಮತ್ತು ಮದ್ಯದ ಬಾಟಲಿಗಳನ್ನು ಪಾಲಿಥಿನ್‌ನಲ್ಲಿ ತುಂಬಿಕೊಂಡಿದು ನಶೆ ತಲೆಗೆ ಏರಿದ ಕಾರಣ ನಿದ್ರಾ ಲೋಕಕ್ಕೆ ಜಾರಿದ್ದಾನೆ.ಬೆಳಗ್ಗೆ ಅಂಗಡಿ ಮಾಲೀಕ ಮತ್ತು ಕೆಲಸಗಾರರು ಕಳ್ಳ ಮಲಗಿರೋದನ್ನು ಗಮನಿಸಿ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮದ್ಯದಂಗಡಿಯಲ್ಲಿ ಕುಡಿದು ಮಲಗಿದ ಕಳ್ಳನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈತನ ಅವತಾರಕ್ಕೆ ಮದ್ಯಪ್ರಿಯರು ನಕ್ಕು ನಳಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular