ಹೆಡಿಂಗ್ಲಿ: ಲೀಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆAಡ್ ನಡುವಿನ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ೬ ರನ್‌ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. 2ನೇ ದಿನದಂತ್ಯಕ್ಕೆ 209 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸದೃಢವಾಗಿದ್ದ ಇಂಗ್ಲೆAಡ್ ತAಡಕ್ಕೆ 3ನೇ ದಿನದಾಟದಲ್ಲಿ ಪ್ರಸಿದ್ಧ್ ಕೃಷ್ಣ ಹಾಗೂ ಜಸ್‌ಪ್ರೀತ್ ಬುಮ್ರಾ ದಾಳಿಗೆ ಮುಗ್ಗರಿಸಿದೆ.
100 ರನ್ ಗಳಿಸಿದ ಓಲ್ಲಿ ಪೋಪ್ ಹಾಗೂ ಶೂನ್ಯ ಸುತ್ತಿದ್ದ ಹ್ಯಾರಿ ಬ್ರೂಕ್, ಮೊದಲ ಸೆಷನ್‌ನಲ್ಲೇ ಬೇರ್ಪಟ್ಟಿತು. ಕೇವಲ 6 ರನ್ ಜೋಡಿಸಿದ ಪೋಪ್ ಅವರನ್ನು ಕನ್ನಡಿಗ ಪ್ರಸಿದ್ಧ್ ಕೃಷ್ಣ ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ನಾಯಕ ಬೆನ್ ಸ್ಟೋಕ್ಸ್ ಕೂಡ 52 ಎಸೆತಗಳಲ್ಲಿ ತಾಳ್ಮೆಯಾಟವಾಡಿ 20 ರನ್‌ಗಳಿಸಿದರು ಜೀವದಾನ ಪಡೆದ ಜೆಮ್ಮಿ ಸ್ಮಿತ್ 40 ರನ್‌ಗಳಿಸಿ ತಂಡವನ್ನು ಮುನ್ನೂರರ ಗಡಿ ದಾಟಿಸಿದರು. ನಂತರವೂ ತನ್ನ ಶತಕದಾಸೆ ಈಡೇರಿಸಿಕೊಳ್ಳಲು ಮುನ್ನುಗ್ಗಿದ ಹ್ಯಾರಿ ಬ್ರೂಕ್ 99 ರನ್‌ಗಳಿಸಿದರು. ಆದರೆ, ಇಲ್ಲೂ ಪ್ರಸಿದ್ಧ್ ಕೃಷ್ಣರ ಬೌನ್ಸರ್ ಅನ್ನು ಸಿಕ್ಸರ್ ಬಾರಿಸಲು ಹೋಗಿ ಸಿರಾಜ್‌ಗೆ ಕ್ಯಾಚ್ ನೀಡಿದರು. ಕೊನೆಯ 3 ವಿಕೆಟ್‌ಗಳ ಪೈಕಿ ಬುಮ್ರಾ ಇಬ್ಬರ ವಿಕೆಟ್ ಉರುಳಿಸಿದರು. ಇದರಿಂದ ಇAಗ್ಲೆAಡ್ ಇನ್ನಿಂಗ್ಸ್ ಅಂತ್ಯವಾಯಿತು.
ಉತ್ತಮ ಮುನ್ನಡೆಯತ್ತ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 4 ರನ್‌ಗಳಿಸಿದ ಜೈಸ್ವಾಲ್ ಅವರನ್ನು ಬಹುಬೇಗ ಕಳೆದುಕೊಂಡಿತು. ಇದಾದ ಬಳಿಕ 2ನೇ ವಿಕೆಟ್‌ಗೆ ಕೆ.ಎಲ್.ರಾಹುಲ್ ಹಾಗೂ ಸಾಯಿ ಸುದರ್ಶನ್ ತಾಳ್ಮೆಯ ಬ್ಯಾಟಿಂಗ್ ನಡೆಸಿದರು. ಇದರಿಂದ ಭಾರತ ನೂರಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿತು. ಆದರೆ, ಸಾಯಿ ಸುದರ್ಶನ್ 30 ರನ್‌ಗಳಿಸಿ ಸ್ಟೋಕ್ಸ್ ಔಟಾದರು.
ಇಂಗ್ಲೆAಡ್, ನ್ಯೂಜಿಲೆಂಡ್ ಹಾಗೂ ಆಸ್ಟೆçÃಲಿಯಾದ ಪಿಚ್‌ಗಳಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೇ ವಿದೇಶಗಳಲ್ಲಿ 12ನೇ ಬಾರಿ ಇನ್ನಿಂಗ್ಸ್ ಒAದರಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದು, ಸೇನಾ ರಾಷ್ಟçಗಳಲ್ಲಿ 150 ವಿಕೆಟ್‌ಗಳನ್ನು ಸಾಧಿಸಿದಮೊಟ್ಟ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ.ಕಪಿಲ್‌ದೇವ್ ದಾಖಲೆ ಸಮಬಲ ಭಾನುವಾರ ಐದು ವಿಕೆಟ್ ಎತ್ತಿದ ಬುಮ್ರಾ ವಿದೇಶಿ ನೆಲದಲ್ಲಿ ಅತ್ಯಧಿಕ`ಫೈಫರ್’ಗಳ ಮಾಜಿ ನಾಯಕ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದರು. ಕಪಿಲ್ ದೇವ್ 66 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು, ಬುಮ್ರಾ 34 ಟೆಸ್ಟ್ ನಲ್ಲಿ ಸಾಧನೆ ಸರಿಟ್ಟಿದರು.