Thursday, March 12, 2026
Flats for sale
Homeರಾಜ್ಯಹುಲಸೂರ : ಸೋಯಾಬಿನ್ ಕಟಾವಿಗೆ ಕೂಲಿಕಾರರ ಕೊರತೆ,ರೈತರು ಕಂಗಾಲು.

ಹುಲಸೂರ : ಸೋಯಾಬಿನ್ ಕಟಾವಿಗೆ ಕೂಲಿಕಾರರ ಕೊರತೆ,ರೈತರು ಕಂಗಾಲು.

ಹುಲಸೂರ : ತಾಲ್ಲುಕಿನಾದ್ಯಂತ ಸೋಯಾಬಿನ್ ಕಟಾವಿಗೆ ಕೂಲಿಯಾಳುಗಳ ಕೋರತೆ ಕಂಡು ಬರುತ್ತಿದ್ದು, ರೈತಾಪಿ ಕುಂಟುಬಸ್ಥರು ಕುಡಿಕೊಂಡು ಹೋಲಗಳಲ್ಲಿ ಸೋಯಾಬಿನ್ ಕಟಾವು ಮಾಡಿ ,ರಾಶಿ ಮಾಡುತ್ತಿರುವುದು ಅಲ್ಲಲಿ ಕಂಡು ಬರುತ್ತಿದೆ.

ಪ್ರಯುಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಅವಧಿಯಲ್ಲಿ ಸೋಯಾಬಿನ್ ಕಟಾವಿಗೆ ಬಂದಿದು ಕೂಲಿಕಾರರ ಕೊರತೆ ದೊಟ್ಟ ಮಟ್ಟದಲ್ಲಿ ಕಂಡು ಬರುತ್ತಿದ್ದು ,ರೈತರು ಕಂಗಾಲಾಗಿದ್ದಾರೆ. ತಾಲ್ಲುಕಿನ ಸುತ್ತಮುತ್ತಲಿನ ಗ್ರಾಮಗಳಾದ ಗಡಿಗೌಡಗಾಂವ, ಹಾಲಹಳ್ಳಿ,ದೇವನಾಳ ,ಸೋಲದಾಬಕಾ,ತೋಗಲೂರ,ಬೇಲೂರು,ಗೋರ್ಟಾ, ಮುಚಳಂಬ,ಕಾದೇಪುರವಾಡಿ ಸೇರಿ ಹಲವು ಗ್ರಾಮಗಳಲ್ಲಿ ಸೋಯಾ ಬೆಳೆ ಕಟಾವಿಗೆ ಬಂದಿದೆ,ಆದರೆ ಕೂಲಿ ಆಳುಗಳು ಹಳ್ಳಿಯಿಂದ ಸಿಟಿಗಳ ಕಡೆ ಮುಖಮಾಡಿರುವುದು ,ದೊಡ್ಡ ಸಮಸ್ಯೆ ರೈತಾಪಿ ಜನರಿಗೆ,ಉಂಟಾಗುತ್ತಿದೆ.

ಕೂಲಿ ಆಳುಗಳು ಸಿಟಿಯ ಕಂಪನಿ,ಸ್ವಯಂ ಉದ್ಯೋಗಮಾಡುವುದರಿಂದ ನಾಲ್ಕು ದುಡ್ಡು ಕಾಣುತ್ತಿರುವದರಿಂದ ಎಲ್ಲರು ಸಿಟಿಗಳ ಕಡೆ ಮುಖ ಮಾಡಿರುವುದು ಸರ್ವಸಾಮಾನ್ಯ ವಾಗಿದ್ದು, ಹಳ್ಳಿಗಳಲ್ಲಿ ರೈತಾಪಿ ದನರು ಹೊಲಗಳ ಮೇಲೆ ಅವಲಂಬಿತ ರಾಗಿರುವುದರಿಂದ ಹೊಲಗಳಲ್ಲಿ ಕುಲಿಆಳುಗಳು ಸಿಗದೇ ಹೋಗದ ಕಾರಣ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಹೆಚ್ಚಿಗೆ ದುಟ್ಟು ಕೊಟ್ಟಿ ತಮ್ಮ ಹೊಲಗಳಲ್ಲಿ ಸೇಯಾಬಿನ್ ಕಟಾವು ಮಾಡಲು ಕರೆತರುತ್ತಿರುವುದು ಅಲ್ಲಲ್ಲಿ ತಾವುಗಳು ಕಾಣಬಹುದು.

ಕುಲಿ ಆಳುಗಳಿಗೆ ಹೆಚ್ಚಿಗೆ ದುಡ್ಡು ಕೊಟ್ಟರು ಸಮಯಕ್ಕೆ ಬರದ ಕಾರಣ, ತಮ್ಮ ತಮ್ಮ ಕುಟುಂಬದವರೇ ತಮ್ಮ ತಮ್ಮ ಮಕ್ಕಳ ಜೋತೆ ಸೋಯಾಬಿನ್ ಕಟಾವು ಹಾಗು ರಾಸಿ ಮಾಡುತ್ತಿರುವುದು ಈ ವರ್ಷ ಹೆಚ್ಚಿನ ಮಟ್ಟದಲ್ಲಿ ಕಂಡು ಬರುತ್ತಿದೆ. ಇಷ್ಟೆಲ್ಲಾ ಆದರು ಕುಡಾ ಸೋಯಾಬಿನ್ ಗೆ ಕಡಿಮೆ ಭಾವು ಇರುವುದರಿಂದ, ಬೆಳೆಗಳಿಗೆ ಮಾಡಿರುವ ಖರ್ಚು ಹಾಗು ಕೂಲಿ ಆಳುಗಳಿಗೆ ನೀಡುವ ಕುಲಿಯ ಲೆಕ್ಕ ಮಾಡಿದರೆ ಎನು ಲಾಭವಾಗುತ್ತಿಲ್ಲಾ ಎಂದು ರೈತರಾದ ಜಗನ್ನಾಥ ಬಡದಾಳೆ ತಮ್ಮ ಅಳಲು ತೋಡಿಕೊಂಡಿದಾರೆ.

ರೈತರಿಗೆ ಕೂಲಿ ಕಾರ್ಮಿಕರ ಕೊರತೆ ನಿಗಾಯಿಸಲು ಸರಕಾರದಿಂದ ಕ್ರಷಿಯಂತ್ರಗಳು ಬಾಡಿಗೆಗೆ ನೀಡುಲಾಗುತ್ತದೆ, ಆದರೆ ಅ ಮಶಿನ್ ಗಳ ಮಾಲಿಕರು ಸಮಯಕ್ಕೆ ಬಾರದೇ ಕಾಲಹರಣ ಮಾಡುತ್ತಿದು ನೆಪಗಳು ಹೇಳುತ್ತಿರುವುದು ರೈತರ ಕಂಗೆಣಿಗೆ ಗುರಿಯಾಗಿರುವುದಾಗಿ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಸೋಯಾಬಿನ್ ಕಟಾವು ಹಾಗು ರಾಶಿಗೆ ಕುಲಿ ಆಳುಗಳು ಸಿಗದೇ ಇರುವುದಕ್ಕೆ ತಮ್ಮ ತಮ್ಮ ಹೊಲಗಳಲ್ಲಿ ಕೆಲಸ ಮಾಡದ ಮಾಲಿಕರು ಕುಡಾ ತಮ್ಮ ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ,ಅವರು ಮಾಧ್ಯಮದ ಜೊತೆ ಮಾತನಾಡಿ ಕೈಗೆ ಬಂದ ತುತ್ತು ಬಾಯಿಗೆ ಬರುವುದು ಕಷ್ಟಕರವಾಗಿದ್ದು,ಈ ರೈತರ ಹೊಳು ಕೇಳುವರು ಯಾರು ಅಂತಿದಾರೆ….!

RELATED ARTICLES

LEAVE A REPLY

Please enter your comment!
Please enter your name here

Most Popular