ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜು ಆವರಣದಲ್ಲಿ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾಳನ್ನ ಹತ್ಯೆ ಮಾಡಲಾಗಿದೆ. ಪ್ರೀತಿಯ ವಿಚಾರಕ್ಕೆ ಬೆಳಗಾವಿ ಮೂಲದ ಫಯಾಜ್ ಎಂಬಾತ 11 ಬಾರಿ ಇರಿದು ಭೀಕರವಾಗಿ ಕೊಲೆಗೈದಿದ್ದಾನೆ.
ಆರೋಪಿ ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಯಾಗಿದ್ದಾನೆ. ತಂದೆ ಬಾಬಾಸಾಬ್, ತಾಯಿ ಮುಮ್ತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಫಯಾಜ್ ಫೇಲ್ ಆಗಿದ್ದರಿಂದ ಕಾಲೇಜ್ ಬಿಟ್ಟಿದ್ದ. ಆತ ಅದೇ ಕಾಲೇಜಿನಲ್ಲಿ ಬಿಸಿಎ ಕೋರ್ಸ್ನಲ್ಲಿ ಫೇಲ್ ಆಗಿದ್ದ. ಬಿಸಿಎ ಕಲಿಯುವಾಗ ವೇಳೆ ನೇಹಾ ಆತನ ಕ್ಲಾಸ್ಮೇಟ್ ಆಗಿದ್ದರು.
ಹಲವು ಸಮಯದಿಂದ ಆಕೆಯ ಹಿಂದೆ ಬಿದ್ದಿದ್ದ ಫಯಾಜ್ ಪ್ರೀತಿ ಮಾಡುವಂತೆ ಸತಾಯಿಸಿದ್ದ. ಆದರೆ ಅದಕ್ಕೆ ನಿರಾಕರಿಸಿದ್ದಳು. ಅಂತೆಯೇ ಗುರುವಾರ ಕಾಲೇಜಿಗೆ ಚಾಕು ಸಮೇತ ಬಂದಿದ್ದ ಆತ ಕೊಲೆ ಮಾಡಿದ್ದಾನೆ.ಕೊಲೆಯಾದ ಯುವತಿ ತಂದೆಯನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿಯಾಗಿದ್ದಾರೆ. ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಗಳ ಸಾವಿಗೆ ನ್ಯಾಯ ಸಿಗಲೇಬೇಕು ಅಂತ ನಿರಂಜನ್ ಹಿರೇಮಠ್ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.
ನೇಹಾಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಆರೋಪಿ ಫಯಾಜ್ ಕೊಂಡಿಕೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ನ ಆಡಳಿತದಲ್ಲಿ ಭಯ ಇಲ್ಲದಂತಾಗಿದೆ’ ಅಂತ ಕಿಡಿಕಾರಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಲಹ್ ಜಿಹಾದ್ ಆಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಲವ್ ಮಾಡುತ್ತಿದ್ದೇನೆ ಅಂತಾ ಇದ್ದರೂ ಸಹಿತ ಆಮೇಲೆ ಬೇಡ ಅಂದಿರಬಹುದು. ಅದಕ್ಕೆ ಮರ್ಡರ್ ಮಾಡಬೇಕು ಅಂತಾ ಏನಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದರು. ಅಲ್ಲದೇ ಲವ್ ಜಿಹಾದ್ ಆಯಾಮದಲ್ಲೂ ತನಿಖೆ ಆಗಬೇಕು. ಈ ವಿಚಾರದಲ್ಲೂ ಅತ್ಯಂತ ಗಂಭೀರವಾಗಿ ತನಿಖೆ ಆಗಬೇಕು ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.