ಹುಬ್ಬಳ್ಳಿ ; ಜನವರಿ 10 ರಂದು ಹುಬ್ಬಳ್ಳಿಯ ಎಪಿಎಂಸಿ ಮಾರಡಗಿ ರೋಡ್ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ನವನಗರ ಪೊಲೀಸರು ಮೃತನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಕೊಲೆಯಾದ ವ್ಯಕ್ತಿ ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ (40) ಎಂದು ತಿಳಿದುಬಂದಿತ್ತು .ಆದರೆ ಈ ಕೊಲೆ ಪ್ರಕರಣವನ್ನು ಬೇಧಿಸಿದ ಹುಬ್ಬಳ್ಳಿ ಪೊಲೀಸರು ಪತ್ನಿ ಮಂಜುಳಾನ್ನು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಪತ್ನಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಎಪಿಎಂಸಿ-ಮಾರಡಗಿ ರೋಡ್ನಲ್ಲಿ ನಡೆದಿದೆ. ಪತ್ನಿ ಮಂಜುಳಾ ಮತ್ತು ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿ ಜೈಲು ಸೇರಿದ ಪ್ರೇಮಿಗಳು. ಇತ್ತ ಪತ್ನಿ ಮಂಜುಳಾ ಗಂಡನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ನವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಪತ್ನಿಯ ಮೊಬೈಲ್ ಫೋನ್ ಹಾಗೂ ಇನ್ನಿತರ ಮಹತ್ವವಾದ ಧಾಖಲೆಗಳನ್ನು ಪತ್ತೆಹಚ್ಚಿ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಚಂದ್ರಶೇಖರ ಲಮಾಣಿ ಪತ್ನಿ ಮಂಜುಳಾ ಮೇಲೆ ಸಂಶಯ ವ್ಯಕ್ತವಾಗಿ ವಿಚಾರಣೆ ನಡೆಸಿದಾಗ ಹಲವು ಮಾಹಿತಿ ಹೊರಬಿದ್ದಿದೆ .ಕಳೆದ ಐದು ವರ್ಷಗಳಿಂದ ರಿಯಾಜ್ ಅಹ್ಮದ್ ಮತ್ತು ನನ್ನ ನಡುವೆ ಅನೈತಿಕ ಸಂಬಂಧ ಇತ್ತು. ಇದಕ್ಕೆ ಪತಿ ಚಂದ್ರಶೇಖರ ಲಮಾಣಿ ವಿರೋಧ ಮಾಡುತ್ತಿದ್ದನು. ಅಲ್ಲದೆ ನನಗೆ ಕಿರುಕುಳ ನೀಡಲು ಆರಂಭಿಸಿದ್ದನು. ಈ ಬಗ್ಗೆ ಪ್ರಿಯಕರ ರಿಯಾಜ್ ಅಹ್ಮದ್ ಗೆ ಹೇಳಿದ್ದೆ ಈ ವಿಚಾರದಲ್ಲಿ ರಿಯಾಜ್ ಅಹ್ಮದ್ ನನ್ನ ಗಂಡನನ್ನು ಕೊಲೆಮಾಡಿದ್ದಾನೆ ಎಂದು ಸತ್ಯ ಬಾಯಿಬಿಟ್ಟಿದ್ದಾಳೆ.


