ಹುಬ್ಬಳ್ಳಿ : ನಗರದ ಹೊರವಲಯದಲ್ಲಿ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.
ನಗರದ ನೇಕಾರನಗರ ಚೆಕ್ ಪೋಸ್ಟ್ ಹತ್ತಿರದ ಬ್ರಿಡ್ಜ್ ಬಳಿ ಅಂದಾಜು 35-40 ವಯಸ್ಸಿನ ವ್ಯಕ್ತಿ ಅರ್ಧಬರ್ಧ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಇಂದು ಬೆಳಿಗ್ಗೆ ದಾರಿ ಹೋಕರು ಮೃತದೇಹವನ್ನು ನೋಡಿ ಸ್ಥಳೀಯ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧರಿಸಿ ಸ್ಥಳಕ್ಕೆ ಹಳೇಹುಬ್ಬಳ್ಳಿ ಪೋಲಿಸ ಠಾಣೆಯ ಪೋಲಿಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಆದರೆ ಈವರೆಗೆ ಮೃತನ ಮಾಹಿತಿ ದೊರೆತಿಲ್ಲ. ಸದ್ಯ ಮೃತನ ಕೈ ಮೇಲೆ ಶ್ರೇಯಸ್ ಎಂಬ ಹಚ್ಚೆ ಹಾಕಲಾಗಿದ್ದು, ದೇಹ ಸಂಪೂರ್ಣ ಅರೆಬೆಂದು ಹೋಗಿದೆ. ಈ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.