ಹಾಸನ ; ಸರಕಾರಿ ಶಾಲೆಯ ಬಾಗಿಲ ಮುಂದೆ ಹಾಗೂ ಶಾಲೆಯ ಆವರಣದಲ್ಲಿ ಕಿಡಿಗೇಡಿಗಳು ವಾಮಾಚಾರ ಮಾಡಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮುದುಡಿ ಗ್ರಾಮದಲ್ಲಿ ನಡೆದಿದೆ.

ಒಂಭತ್ತನೇ ತರಗತಿ ಕೊಠಡಿ ಎದರು ಬೆಚ್ಚಿ ಬೀಳಿಸುವ ವಾಮಾಚಾರ ನಡೆಸಿದ್ದು ಬುಧವಾರ ರಾತ್ರಿ ಶಾಲೆಯ ಎದುರು ತೆಂಗಿನಗರಿಯಿಂದ ಚಪ್ಪರ ಹಾಕಿ ಗೊಂಬೆ ಮುರಿದಿದ್ದಾರೆ. ಕೊಠಡಿಯ ಬಾಗಿಲಿಗೆ ಹಾಕಿರುವ ಬೀಗಕ್ಕೆ ಹಸಿ ನೂಲು ಸುತ್ತಿದ್ದು
ಕೊಠಡಿಯ ಬಾಗಿಲಿನಿಂದ ನಾಲ್ಕು ದಿಕ್ಕುಗಳಿಗೂ ಹಸಿ ನೂಲು ಕಟ್ಟಿದ್ದಾರೆ.
ಮುದುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು
ಕೊಠಡಿ ಮುಂದೆ ಹರಿಶಿನ, ಕುಂಕುಮ, ಬಾಳೆಹಣ್ಣು, ತೆಂಗಿನಕಾಯಿಗಳನ್ನು ಇಟ್ಟಿದ್ದಾರೆ.
ಸತತ ಎರಡು ದಿನಗಳಿಂದ ವಾಮಾಚಾರ ನಡೆಯುತ್ತಿದ್ದು,ಎಳನೀರು, ಹೊಂಬಾಳೆ, ತೆಂಗಿನಕಾಯಿ, ಕಿತ್ತಳೆಹಣ್ಣು, ಇತರೆ ಪೂಜಾ ಪದಾರ್ಥಗಳನ್ನಿಟ್ಟು ಮಾಟ-ಮಂತ್ರ ಮಾಡಿದ್ದಾರೆ.
ಸುಮಾರು ಎಪ್ಪತ್ತು ಮಕ್ಕಳಿರುವ ಸರ್ಕಾರಿ ಪ್ರೌಢಶಾಲೆ ಇದಾಗಿದ್ದು ವಾಮಾಚಾರದಿಂದ ಶಾಲೆಯ ಮಕ್ಕಳಲ್ಲಿ ಆತಂಕವುಂಟಾಗಿದೆ. ಇದೀಗ ಪೊಲೀಸ್ ಠಾಣೆಗೆ ದೂರು ನೀಡಲು ಶಾಲೆಯ ಮುಖ್ಯೋಪಾಧ್ಯಾಯ ಮುಂದಾಗಿದ್ದಾರೆಂದ ಮಾಹಿತಿ ದೊರೆತಿದೆ.


