ಹಾಸನ : ರಾಜಕಾಲುವೆಗೆ ಮುದ್ದಾದ ನವಜಾತ ಹೆಣ್ಣು ಶಿಶುವನ್ನು ಪಾಪಿ ತಾಯಿ ಎಸೆದಿರುವ ಘಟನೆ ಹಾಸನ ಜಿಲ್ಲೆಯ ಕುವೆಂಪು ನಗರದಲ್ಲಿನಡೆದಿದೆ.
ರಾಜಜಾಲುವೆಯಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದ್ದು ಮಗು ಜನಸಿದ ಕೂಡಲೇ ಪಾಪಿಗಳು ಮಗುವನ್ನು ಬಿಸಾಡಿರುವ ಸಂಶಯ ವ್ಯಕ್ತವಾಗಿದೆ. ಮಗು ಮೃತಪಟ್ಟಿದ್ದು ನವಜಾತ ಶಿಶುವಿನ ಮೃತದೇಹದಲ್ಲಿರುವ ಕರುಳ ಬಳ್ಳಿಗಳು ಕಂಡುಬಂದಿದೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಬಿಸಾಡಿರುವ ಶಂಕೆವ್ಯಕ್ತವಾಗಿದ್ದು ರಾಜುಕಾಲುವೆಯಲ್ಲಿ ಹರಿಯುವ ಕೊಳಚೆ ನೀರಿನಲ್ಲಿ ಬಿದ್ದಿರುವ ನವಜಾತ ಶಿಶು ಮೃತದೇಹವನ್ನು ಕಂಡು ಸ್ಥಳೀಯರು ನೀಚ ತಾಯಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.