Friday, March 13, 2026
Flats for sale
Homeರಾಜಕೀಯಹಾಸನ : 5 ವರ್ಷದ ವರೆಗೆ ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿ : ಯತೀಂದ್ರ ಸಿದ್ದರಾಮಯ್ಯ.

ಹಾಸನ : 5 ವರ್ಷದ ವರೆಗೆ ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿ : ಯತೀಂದ್ರ ಸಿದ್ದರಾಮಯ್ಯ.

ಹಾಸನ : ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಡಿ .ಕೆ ಶಿವಕುಮಾರ್ ಹರಸಾಹಸ ಪಟ್ಟಿದ್ದಾರೆಂಬುದು ನಿಜವಾದ ಸಂಗತಿ ,ಆದರೆ ಸಿದ್ದರಾಮಯ್ಯ ಅಷ್ಟು ಸುಲಭವಾಗಿಗೆ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ, ಇನ್ನೇನು ಲೋಕಸಭೆ ಚುನಾವಣೆ ಕೆಲವೇ ತಿಂಗಳಲ್ಲಿ ನಡೆಯಲಿದೆ ಇದರ ಮಧ್ಯೆ ಸಿ.ಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ತಂದೆಯ ಪರವಾಗಿ ಕುರ್ಚಿ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.ಈ ಮದ್ಯೆ ಮತ್ತೊಮ್ಮೆ ಸರ್ಕಾರದಲ್ಲಿ ಭಿನ್ನಮತದ ಶಮನ ಭುಗಿಲೇಳುವ ಲಕ್ಷಣ ಕಾಣುತ್ತಿರುವುದು ಕಂಡುಬಂದಿದೆ.

ನಮ್ಮ ಸರ್ಕಾರ ಐದು ವರ್ಷಗಳ ಅವಧಿ ಪೂರೈಸುತ್ತದೆ ಹಾಗೂ ಸಿದ್ದರಾಮಯ್ಯ ಅವರೂ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎನ್ನುವುದು ನನ್ನ ನಂಬಿಕೆ ಎಂದು ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಅವರು ಮಾತನಾಡಿ, ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಆಗುತ್ತಾರೆ ಎನ್ನುವುದೆಲ್ಲ ಊಹಾಪೋಹ ಅಷ್ಟೆ. ಆ ರೀತಿ ಏನೂ ಇಲ್ಲ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂಬ ಕೆಲ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲಾ ಸರ್ಕಾರ ಇದ್ದಾಗಲೂ ಆ ರೀತಿ ಇದ್ದೇ ಇರುತ್ತೆ. ಬಿಜೆಪಿ ಸರ್ಕಾರ ಇದ್ದಾಗ ಎಷ್ಟೋ ಜನ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರು. ಅವರ ಬೆಂಬಲಿಗರು ಕೂಡ ಮಾತನಾಡಿದ್ದರು ಎಂದರು.

ಒಂದು ಸ್ಥಿರವಾದ ಸರ್ಕಾರ ಕೊಡಬೇಕಿರುವುದು ಎಲ್ಲಾ ಪಕ್ಷಗಳ ಜವಾಬ್ದಾರಿ. ನಮ್ಮ ಕಾಂಗ್ರೆಸ್ ಪಕ್ಷ ಕೂಡ ಅದಕ್ಕೆ ಬದ್ಧವಾಗಿರುತ್ತೆ. ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ ಎಂಬುದು ನನ್ನ ನಂಬಿಕೆ ಎಂದು ಅವರು ಪುನರುಚ್ಚರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular