ಹಾಸನ : ಮಾಂಗಲ್ಯ ಧಾರಣೆ ಆಗುತ್ತಲೇ ಮುಹೂರ್ತ ಮುಗಿಸಿ ಪರೀಕ್ಷಾ ಕೇಂದ್ರಕ್ಕೆ ವಧು ಬಂದು ಅಂತಿಮ ವರ್ಷದ ಬಿಕಾಂ ಆದಾಯ ತೆರಿಗೆ ಎರಡು ವಿಷಯ ಪರೀಕ್ಷೆ ಬರೆದ ಘಟನೆ ಹಾಸನದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಮದುವೆ ಮುಹೂರ್ತ 9 ಗಂಟೆಗೆ ನಿಗದಿಯಾಗಿದ್ದು ಹಾಸನದ ಗುಡ್ಡೆನಹಳ್ಳಿಯ ದಿನೇಶ್ ಜೊತೆ ದಾಂಪತ್ಯ ಜೀವನಕ್ಕೆ ವಧು ಕವನ ತಯಾರಿಯಾಗಿದ್ದಳು ಅದರ ಜೊತೆಗೆ ಪರೀಕ್ಷೆ ಬರೆಯಲು ಕೊಠಡಿಗೆ ತೆರಳಿದ್ದಾಳೆ.
ಕವನ ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್ ಅನಸೂಯ ದಂಪತಿ ಪುತ್ರಿ,ಹಾಸನದ ಪ್ರೈಡ್ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿದ್ದಳು,ಅಂತಿಮ ವರ್ಷದ ಕೊನೆಯ ಸಬ್ಜೆಕ್ಟ್ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಮದುವೆ ಮಂಟಪ ದಿಂದಲೇ ಬಂದಿಳಿದಿದ್ದಾಳೆ. ಪರೀಕ್ಷೆ ಬರೆಯಲೇಬೇಕೆಂಬ ಯುವತಿ ಆಸೆಗೆ ಸಾಥ್ ಪೋಷಕರು ನೀಡಿದ್ದು ಮುಹೂರ್ತ ಮುಗಿಯುತ್ತಲೇ ಪರೀಕ್ಷೆ ಕೇಂದ್ರಕ್ಕೆ ಅಣ್ಣ ಕಾರ್ತಿಕ್ ಕರೆತಂದಿದ್ದಾನೆ.