ಹಾಸನ : ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಅಸಮಧಾನ ಹೊರಹಾಕಿದ ಕೆ.ಎಂ.ಶಿವಲಿಂಗೇಗೌಡ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಬೇಸರ ಪಡಿಸಿದ್ದಾರೆ.
ಯಾವ ಆಧಾರದಲ್ಲಿ ಮೊದಲ ಪಟ್ಟಿಯಲ್ಲಿ ಅರಸೀಕೆರೆಯಲ್ಲಿ ಬರಪೀಡಿದ ತಾಲೂಕು ಪಟ್ಟಿಯಿಂದ ಕೈ ಬಿಟ್ಟಿದ್ದಾರೋ ಎಂಬುದು ನನಗೆ ಗೋಚರವಾಗ್ತಿಲ್ಲ,ನನಗೆ ನಿನ್ನೆ ಕರೆ ಮಾಡಿ ವಿಚಾರ ತಿಳಿಸಿದ್ರು ನಿನ್ನೆಯೇ ಮಾಧ್ಯಮಗಳ ಮುಂದೆ ಜಿಲ್ಲಾಡಳಿತಕ್ಕೆ ಹಾಗೂ ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಡೋಣ ಎಂದುಕೊಂಡೆನಮ್ಮ ತಾಲೂಕನ್ನ ಯಾವ ಮಾನದಂಡದ ಮೇಲೆ ಕೈ ಬಿಟ್ಟಿದ್ದಾರೆ ಅಂತಾ ಅಧಿಕಾರಿಗಳು ಹೇಳಬೇಕು,ಹೆಚ್ಚು ಮಳೆ ಎಲ್ಲಿ ಬಂದಿದೆ ಅಂತಾನೂ ಹೇಳಬೇಕು,ಮುಂಗಾರು ಭಿತ್ತನೆ ಆಗೋ ಸಮಯದಲ್ಲಿ ಮಳೆ ಬಂದಿಲ್ಲ ಆಮೇಲೆ ಮಳೆ ಬಂತು ಅಂತಾ ಜನ ಭಿತ್ತನೆ ಮಾಡಿದ್ರು ಭಿತ್ತನೆ ಆದ ಬಳಿಕ ಮಳೆ ಬಂದಿಲ್ಲ ಸರಿಯಾದ ಸಮಯದಲ್ಲಿ ಮಳೆ ಬಾರದೇ ಯಾವ ಬೆಳೆಯೂ ಬಂದಿಲ್ಲ ಸಕಲೇಶಪುರ, ಆಲೂರು ಹಾಗೂ ಅರಕಲಗೂಡು ಘೋಷಣೆ ಮಾಡಿದ್ದಾರೆ ಆದ್ರೆ ನಮ್ಮ ತಾಲೂಕನ್ನ ಕೈ ಬಿಟ್ಟಿದ್ದಾರೆ ನಮ್ಮ ಜಿಲ್ಲೆಯನ್ನು ಪೂರ್ಣ ಬರಪೀಡಿತ ಅಂತಾ ಘೋಷಣೆ ಮಾಡಬೇಕು ಅಂತಾ ಜಿಲ್ಲಾಡಳಿತಕ್ಕೆ ಹಾಗೂ ಕೃಷಿ ಅಧಿಕಾರಿಗಳಿಗೆ ಒತ್ತಾಯ ಮಾಡ್ತೇನೆ ಸರ್ಕಾರಕ್ಕೂ ಕೂಡಾ ಒತ್ತಾಯ ಮಾಡ್ತೇನೆ ಇಂದು ಸಂಜೆ ಬೆಂಗಳೂರಿಗೆ ಹೋಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಸಚಿವರನ್ನು ಭೇಟಿ ನೀಡಿ ವಿವರಿಸುತ್ತೇನೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


