Friday, March 13, 2026
Flats for sale
Homeರಾಜ್ಯಹಾಸನ ; ಪ್ರೈವುಡ್ ತುಂಬಿದ ಲಾರಿ ಪಲ್ಟಿಯಾಗಿ ಮಂಗಳೂರು ಮೂಲದ ನಿರ್ವಾಹಕ ಸಾವು…!

ಹಾಸನ ; ಪ್ರೈವುಡ್ ತುಂಬಿದ ಲಾರಿ ಪಲ್ಟಿಯಾಗಿ ಮಂಗಳೂರು ಮೂಲದ ನಿರ್ವಾಹಕ ಸಾವು…!

ಹಾಸನ ; ಬೀಕರ ರಸ್ತೆ ಅಪಘಾತದಲ್ಲಿ ರಸ್ತೆ ಬದಿಗೆ ಪ್ರೈವುಡ್ ತುಂಬಿದ ಲಾರಿ ಪಲ್ಟಿಯಾಗಿ ಮಂಗಳೂರು ಮೂಲದ ನಿರ್ವಾಹಕ ಸಾವನಪ್ಪಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ನಡೆದಿದೆ.

ಪ್ರೈವುಡ್ ತುಂಬಿದ ಲಾರಿ ವೇಗವಾಗಿ ಬರುತ್ತಿದ್ದಾಗ ಎನ್.ಎಚ್.75 ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿಗೆ ಪಲ್ಟಿಯಾಗಿದ್ದು ಪರಿಣಾಮ ಲಾರಿಯ ಕ್ಲೀನರ್ ಸ್ಥಳದಲ್ಲೇ ಸಾವನಪ್ಪಿದ್ದಾನೆ.

ದ.ಕ ಜಿಲ್ಲೆಯ ಬಣತಾಡಿ ಗ್ರಾಮದ ಉಮ್ಮ‌ರ್ ಸಲ್ಮನ್ ಫಾರಿಶ್ (18) ಎಂದು ತಿಳಿದಿದೆ.ಸ್ಥಳಕ್ಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಂಚಾರ ಪೊಲೀಸರು ಬೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular