Tuesday, October 21, 2025
Flats for sale
Homeರಾಜ್ಯಹಾಸನ : ನಗರದ ಹಿಮ್ಸ್‌ ಆಸ್ಪತ್ರೆಯಲ್ಲಿ ವೈದ್ಯರ ಯಡವಟ್ಟು‌ : ರಾಡ್ ಅಳವಡಿಸಿದ್ದ ಕಾಲು ಬದಲಿಗೆ...

ಹಾಸನ : ನಗರದ ಹಿಮ್ಸ್‌ ಆಸ್ಪತ್ರೆಯಲ್ಲಿ ವೈದ್ಯರ ಯಡವಟ್ಟು‌ : ರಾಡ್ ಅಳವಡಿಸಿದ್ದ ಕಾಲು ಬದಲಿಗೆ ಮತ್ತೊಂದು ಕಾಲಿಗೆ ಆಪರೇಷನ್…!

ಹಾಸನ ; ವೈದ್ಯರ ಯಡವಟ್ಟಿಗೆ ಬಡ ಮಹಿಳೆಯೊಬ್ಬರ ನರಳಾಟವಾಡಿದ್ದು ವೈದ್ಯರು ರಾಡ್ ಅಳವಡಿಸಿದ್ದ ಕಾಲು ಬದಲಿಗೆ ಮತ್ತೊಂದು ಕಾಲಿಗೆ ಆಪರೇಷನ್ ಮಾಡಿದ ಅಶ್ಚರ್ಯಕಾರಿ ಘಟನೆ ನಡೆದಿದೆ.

ಚಿಕ್ಕಮಗಳೂರು ಬೂಚನಹಳ್ಳಿ ಕಾವಲು ನಿವಾಸಿ ಜ್ಯೋತಿಯವರು ಕಳೆದ ಎರಡೂವರೆ ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಎಡ ಕಾಲು ಮುರಿದುಕೊಂಡಿದ್ದರು ಆಪರೇಷನ್‌ ಮಾಡಿದ್ದ ವೈದ್ಯರು ರಾಡು ಅಳವಡಿಸಿದ್ದರು ಆಗಿನಿಂದ ಚೆನ್ನಾಗಿದ್ದ ಜ್ಯೋತಿಗೆ ಇತ್ತೀಚೆಗೆ ಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು ಈ ಸಂಬಂಧ ಹಿಮ್ಸ್ ಆಸ್ಪತ್ರೆಗೆ ಬಂದು ಡಾ. ಸಂತೋಷ್ ಎಂಬುವರಿಗೆ ತೋರಿಸಿದ್ದರು ಪರೀಕ್ಷೆ ಮಾಡಿದ ವೈದ್ಯರು, ನೀವು ಬಂದು ದಾಖಲಾಗಿ. ಆಪರೇಷನ್‌ ಮಾಡಿ ಹಿಂದೆ ಅಳವಡಿಸಿರುವ ರಾಡು ತೆಗೆಯಬೇಕು ಎಂದು ಸಲಹೆ ನೀಡಿದ್ದರು.

ಅದರಂತೆ ಮಹಿಳೆ ಕಳೆದ ಶನಿವಾರ ಬಂದು ಆಸ್ಪತ್ರೆಗೆ ದಾಖಲಾಗಿದ್ದು ಅರವಳಿಕೆ ಚುಚ್ಚುಮದ್ದು ನೀಡಿ ಆಪರೇಷನ್ ಮಾಡುವ ಮೂಲಕ ಎಡಗಾಲಿಗೆ ಅಳವಡಿಸಿದ್ದ ಕಬ್ಬಿಣದ ರಾಡು ತೆಗೆಯಬೇಕಿದ್ದ ವೈದ್ಯರು, ಎಡಗಾಲು ಬದಲಿಗೆ ಬಲಗಾಲನ್ನು ಕೊಯ್ದಿದ್ದಾರೆ ಅಷ್ಟೊತ್ತಿಗೆ ಅವರಿಗೇ ಅರಿವಾಯಿತೋ ಅಥವಾ ಬೇರೆಯವರು ಎಚ್ಚರಿಸಿದರೋ, ಕೂಡಲೇ ಜಾಗೃತರಾಗಿದ್ಸು ಕೊಯ್ದಿದ್ದ ಬಲಗಾಲಿಗೆ ಬ್ಯಾಂಡೇಜ್ ಮಾಡಿ ನಂತರ ಎಡಗಾಲನ್ನು ಆಪರೇಷನ್ ಮಾಡುವ ಮೂಲಕ ರಾಡನ್ನು ಹೊರ ತೆಗೆದಿದ್ದಾರೆ. ಮಹಿಳೆ ತೀವ್ರ ನೋವಿನಿಂದ ನಡೆಯಲಾಗದೆ ಆಸ್ಪತ್ರೆಯಲ್ಲಿ ನರಳುತ್ತಿದ್ದು ಆಸ್ಪತ್ರೆಯ ವೈದ್ಯರ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular