Saturday, March 14, 2026
Flats for sale
Homeರಾಜ್ಯಹಾಸನ ; ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ನದಿಗೆ ಬಿದ್ದ ವಿಧ್ಯಾರ್ಥಿ ಪ್ರಾಣಪಾಯದಿಂದ ಪಾರು….!

ಹಾಸನ ; ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ನದಿಗೆ ಬಿದ್ದ ವಿಧ್ಯಾರ್ಥಿ ಪ್ರಾಣಪಾಯದಿಂದ ಪಾರು….!

ಹಾಸನ : ಚಲಿಸುತ್ತಿದ್ದ ರೈಲಿನಿಂದ ಅಯತಪ್ಪಿ ವಿದ್ಯಾರ್ಥಿ ಕಾಲು ಜಾರಿ ನದಿಗೆ ಬಿದ್ದ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ನದಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ವಿದ್ಯಾರ್ಥಿ ಬದುಕಿಉಳಿದಿದ್ದಾನೆಂದು ಮಾಹಿತಿ ದೊರೆತಿದೆ.

ಮುಜಾಮಿಲ್ (17) ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿ.

ಹಾಸನದ ಎಚ್‌ಕೆಎಸ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಮಾಜಾಮಿಲ್,ಕೆ.ಆರ್.ನಗರದಿಂದ ಹಾಸನಕ್ಕೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಚಲಿಸುತ್ತಿದ್ದ ರೈಲ್ವೆ ಬೋಗಿಯ ಮೇಟ್ಟಿಲ ಮೇಲೆ ಒಂದು ಕಾಲಿಟ್ಟು, ಇನ್ನೊಂದು ಕಾಲು ಬೋಗಿಯಿಂದ ಹೊರಗಾಕಿ ಹಾಕಿಕೊಂಡು ನಿಂತಿದ್ದನು ಈ ವೇಳೆ ಆಯತಪ್ಪಿ 70 ರಿಂದ 80 ಅಡಿ ಎತ್ತರದಿಂದ ಹೇಮಾವತಿ ನದಿಗೆ ಬಿದ್ದಿದ್ದಾನೆ.

ಹೇಮಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣವ ಕಡಿಮೆ ಇರುವುದರಿಂದ, ಹರಿಯುವ ನೀರಿನ ಮಧ್ಯೆ ಬಂಡೆ ಹಿಡಿದು ಕಿರುಚಾಡುತ್ತಿದ್ದ ಎಂದು ತಿಳಿದಿದೆ. ಮುಜಾಮಿಲ್ ಕಿರುಚಾಟ ಕೇಳಿ ಸ್ಥಳೀಯರು ಮುಜಾಮಿಲ್‌ನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಮುಜಾಮಿಲ್‌ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular