ಹಾಸನ : ಕಾಫಿಗೆ ಬಂಪರ್ ಬೆಲೆ ಬೆನ್ನಲೇ ಬೆಳೆಗಾರರಿಗೆ ಕಳ್ಳರ ಕಾಟ ಹೆಚ್ಚಾಗಿದೆ.ಇದೀಗ ಮಲೆನಾಡು ಭಾಗದಲ್ಲಿ ಕಾಫಿ ಕಳ್ಳತನ ಹೆಚ್ಚಾಗುತ್ತಿದ್ದು ಸ್ವಂತ ತಮ್ಮನ ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಸಕಲೇಶಪುರ ತಾಲ್ಲೂಕಿನ, ಅರಕೆರೆ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಕಾಫಿ ಕಳ್ಳತನ ನಡೆಯುತ್ತಿದ್ದು ಈ ಬಾರಿ ಕಾಫಿಗೆ ಅಧಿಕ ಬೆಲೆ ಬಂದ ಹಿನ್ನಲೆಯಲ್ಲಿ ಪವನ್ ಎಂಬವರು ಸಿಸಿಟಿವಿ ಅಳವಡಿಸಿದ್ದರು.ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿಯನ್ನು ಪ್ಲಾಸ್ಟಿಕ್ ಚೀಲ ಹಿಡಿದು ಕಾಫಿ ಬೀಜ ಕದಿಯಲು ಒಡಹುಟ್ಟಿದ ತಮ್ಮ ದಿ.ಎ.ಸಿ.ಬಸವರಾಜು ಮನೆಗೆ ಬಂದಿದ್ದ ವಿಡಿಯೋ ಸೆರೆಯಾಗಿದೆ.
ಅಕ್ಕಪಕ್ಕದಲ್ಲೇ ಇರುವ ಸಹೋದರರ ಮನೆಗಳಿದ್ದು ಸ್ಥಳದಲ್ಲಿದ್ದ ಮಂಜುನಾಥ್ ಸಿಸಿಟಿವಿ ನೋಡುತ್ತಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೀಗ ದೊಡ್ಡಪ್ಪನ ವಿರುದ್ದ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಪ್ರಕರಣ ದಾಖಲಾಗಿದೆ.