Wednesday, February 5, 2025
Flats for sale
Homeರಾಜ್ಯಹಾಸನ : ಕರುವೊಂದನ್ನು ಕದ್ದು ಬಾಡೂಟ : 7 ಮಂದಿಯ ಬಂಧನ ..!

ಹಾಸನ : ಕರುವೊಂದನ್ನು ಕದ್ದು ಬಾಡೂಟ : 7 ಮಂದಿಯ ಬಂಧನ ..!

ಹಾಸನ : ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ ಕರುವೊಂದನ್ನು ಕದ್ದು ಬಾಡೂಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದ ಹೂವಣ್ಣ ಎಂಬುವವರಿಗೆ ಸೇರಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದು, ಕಡಿದು ಮಾಂಸದೂಟ ಮಾಡಿದ್ದಾರೆ. ಮೂರು ದಿನಗಳ ಹಿಂದೆ ಕರುವನ್ನು ದುಷ್ಕರ್ಮಿಗಳು ಕದ್ದಿದ್ದರು. ಕರುವಿಗಾಗಿ ಹುಡುಕಾಟ ನಡೆಸಿದಾಗ, ಮಡಬಲು ಗ್ರಾಮದ ರೈಲ್ವೆ ಗೇಟ್ ಸಮೀಪ ಕರುವಿನ ರುಂಡ ಪತ್ತೆಯಾಗಿತ್ತು.ಈ ಸಂಬAಧ ೭ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅದೇ ಗ್ರಾಮದ ಅಜ್ಗರ್, ಕೌಶಿಕ್, ಮೋಹನ್, ಮನೋಜ್, ಚಂದನ್, ಪವನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾಕ್ಷ್ಯ ನಾಶಕ್ಕಾಗಿರುಂಡ, ಕರುಳು ಹಾಗೂ ಚರ್ಮವನ್ನುನದಿಗೆ ಎಸೆಯಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಬೆಳಗಾಗಿದ್ದು ಜಮೀನು ಕೆಲಸಕ್ಕೆ ರೈತರು ಬರುತ್ತಿರುವುದನ್ನು ಕಂಡು ರುಂಡವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಆಲೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular