Friday, March 13, 2026
Flats for sale
Homeರಾಜ್ಯಹಾವೇರಿ ; ಹದಿಹರೆಯದವರಿಗೆ ಲೈಂಗಿಕ ಶಿಕ್ಷಣ ಅವಶ್ಯ; ಎಸ್.ಎಫ್ ಹನಕನಹಳ್ಳಿ.

ಹಾವೇರಿ ; ಹದಿಹರೆಯದವರಿಗೆ ಲೈಂಗಿಕ ಶಿಕ್ಷಣ ಅವಶ್ಯ; ಎಸ್.ಎಫ್ ಹನಕನಹಳ್ಳಿ.

ಹಾವೇರಿ ; ಸವಣೂರು ಪಟ್ಟಣದ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ NSS ಘಟಕ ಕನ್ನಡ ಮತ್ತು ಸಂಸ್ಕೃತಿಕ ಸಂಘ ಹಾಗೂ ತಾಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸವಣೂರು ಇವರ ಸಂಯುಕ್ತ ಆಶಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಹದಿಹರೆಯದವರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಫ್ ಹನಕಹಳ್ಳಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಎಚ್ಐವಿ ಮತ್ತು ಏಡ್ಸ್ ರೋಗದ ಕಾರಣಗಳು ಲಕ್ಷಣಗಳು , ಇರುವ ಚಿಕಿತ್ಸಾ ವಿಧಾನಗಳು ಹಾಗೂ ಯುವ ಸಮುದಾಯ ವಹಿಸಬೇಕಾದ ಮುಂಜಾಗ್ರತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಮಾಲತೇಶ ದಾನಪ್ಪನವರ ವಹಿಸಿದ್ದರು.ಕಾರ್ಯಕ್ರಮದಲ್ಲಿ HIV ಏಡ್ಸ್ ರೋಗದ ಲಕ್ಷಣ, ಮುಂಜಾಗ್ರತೆ ಕುರಿತು ಬಂಟಿಗ್ಸಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಜಾಗೃತಿ ಮೂಡಿಸಲಾಯಿತು.

ಆರೋಗ್ಯ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಪ್ತ ಸಮಾಲೊಚಕರಾದ ಶ್ರೀ ಮುತ್ತೇಶ ಭೋವಿ, ಉಪನ್ಯಾಸಕರಾದ A.H. ಭರಡಿ. ವಿನಯ್ ಭಜಂತ್ರಿ, I.K. ಕಲ್ಮನಿ, ವಿದ್ಯಾ ಗುಡಿಗೇರಿ, ಶಿಲ್ಪ ಕೂಡಲ. ರೂಪಾ.N.H. ಅಮಿತ ಸರ್ವದೆ. ಸರಸ್ವತಿ ಮುಗಳಿ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular