ಹಾವೇರಿ : ಕಣ್ಣುಮುಚ್ಚಿ ತೆರೆಯುವದರೊಳಗೆ ನಿಲ್ಲಿಸಿದ್ದ ಬೈಕುಗಳನ್ನು ಹಾರಿಸಿಕೊಂಡು ಹೋಗುತ್ತಿದ್ದ ಆಪಾದಿತ ಐನಾತಿ ಕಳ್ಳನನ್ನು ಬಂಧಿಸುವಲ್ಲಿ ಶಿಗ್ಗಾವಿ ಠಾಣೆಯ ಪೋಲಿಸರು ಯಶಸ್ವೀಯಾಗಿದ್ದಾರೆ.
ಪಟ್ಟಣದಲ್ಲಿ ನಡೆದಿದ್ದ ಬೈಕ ಕಳ್ಳತನದ ಆರೋಪಗಳ ಆಧಾರದಲ್ಲಿ ಹಾವೇರಿಯ ಎಸ್.ಪಿ ಅಂಶುಕುಮಾರ, ಹೆಚ್ಚುವರಿ ಎಸ್.ಪಿ. ಸಿ.ಗೋಪಾಲ ಶಿಗ್ಗಾವಿಯ ಡಿ.ವಾಯ್.ಎಸ್.ಪಿ ಮಂಜುನಾಥ ಜಿ. ಇವರ ಮಾರ್ಗದರ್ಶನದಲ್ಲಿ ಶಿಗ್ಗಾವಿ ಠಾಣೆಯ ಪಿ.ಎಸ್.ಐ ಗಳಾದ ಎಸ್.ಬಿ.ಮಾಳಗೊಂಡ, ಉಮಾ ಪಾಟೀಲ ಸೇರಿದಂತೆ ಸಿಬ್ಬಂದಿಗಳಾದ ವೆಂಕಟೇಶ ಲಮಾಣಿ, ಆನಂದ ದೊಡ್ಡಮನಿ, ಎಸ್.ಕೆ.ಕಂದಿಲವಾಲೆ, ಮಂಜುನಾಥ ಲಮಾಣಿ ಇವರುಗಳ ತಂಡವನ್ನು ರಚಿಸಿ, ಕಾರ್ಯಾಚರಣೆ ಮಾಡಿ, ತಡಸ ಗ್ರಾಮದ ೨೬ ವರ್ಷದ ಆಪಾದಿತ ರಮೇಶ ಗಂಗಪ್ಪಾ ಮುಗಳಿಕಟ್ಟಿ ಎಂಬುವನನ್ನು ಬಂಧಿಸುವಲ್ಲಿ ಯಶಸ್ವೀಯಗಿ ಆರೋಪಿಯಿಂದ ೧ಲಕ್ಷ ೯೦ಸಾವಿರ ಕಿಮ್ಮತ್ತಿನ ೬ ಬೈಕುಗಳನ್ನು ವಶಪಡೆಸಿಕೊಳ್ಳಲಾಗಿದೆ.


