Thursday, July 23, 2026
Homeಜಿಲ್ಲೆಸುಳ್ಯ : ಗೋಡಾನ್‌ನಿಂದ ಅಡಿಕೆ ಕಳ್ಳತನ : ಆರೋಪಿಗಳ ಬಂಧನ..!

ಸುಳ್ಯ : ಗೋಡಾನ್‌ನಿಂದ ಅಡಿಕೆ ಕಳ್ಳತನ : ಆರೋಪಿಗಳ ಬಂಧನ..!

ಸುಳ್ಯ : ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲಕರಾದ ಮಹಮ್ಮದ್‌ ರಫೀಕ್‌ ಎಸ್‌ ಡಿ ರವರಿಗೆ ಸೇರಿದ ಅಡಿಕೆ ಸಂಗ್ರಹಿಸುವ ಗೋಡಾನ್‌ನಿಂದ ಸೆ 12. ರಂದು ರಾತ್ರಿ ಅಡಿಕೆಯನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಅಪರಾದ ಕ್ರಮಾಂಕ:103/2025 ಕಲಂ 331(4) 305(ಎ) 3(5) ಬಿಎನ್‌ಎಸ್‌-2023 ರಂತೆ ಪ್ರಕರಣ ದಾಖಾಲಾಗಿದ್ದು ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಮಂಡೆಕೋಲು ಗ್ರಾಮ ಸುಳ್ಯ ತಾಲೂಕು ನಿವಾಸಿ ಸುಪ್ರಿತ್‌ ಕೆ(22) ಹಾಗೂ ಜಾಲ್ಸೂರು ಗ್ರಾಮದ ನಿವಾಸಿ ಮಹಮ್ಮದ್‌ಸಿನಾನ್‌(21ವರ್ಷ) ಎಂದು ತಿಳಿದುಬಂದಿದೆ.

ಆರೋಪಿಗಳನ್ನು ಸೆ.೧೯ ರಂದು ಸುಳ್ಯ ತಾಲೂಕು ಮಂಡೆಕೋಲು ಗ್ರಾಮ ಮುರೂರು ಚೆಕ್‌ ಪೋಸ್ಟ್‌ ಬಳಿ ವಶಕ್ಕೆ ಪಡೆದು ಆರೋಪಿಗಳು ಕಳುವು ಮಾಡಿದ 1 ಕ್ವಿಂಟಲ್‌ ಸುಲಿದ ಅಡಿಕೆ ಸಾಗಾಟ ಮಾಡಲು ಉಪಯೋಗಿಸಿರುವ ಕೆಎ 21 ಸಿ 5862ನೇ ನಂಬ್ರದ ಆಟೋ ರಿಕ್ಷಾವನ್ನು ಸ್ವಾದೀನಪಡಿಸಿಕೊಂಡು ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular