Saturday, July 25, 2026
Homeರಾಜ್ಯಸುರಪುರ : ಶಾರ್ಟ್ ಸರ್ಕ್ಯೂಟ್ ನಿಂದ ಕೊಟ್ಟಿಗಲ್ಲಿದ್ದ ಎತ್ತು ಸಾವು.

ಸುರಪುರ : ಶಾರ್ಟ್ ಸರ್ಕ್ಯೂಟ್ ನಿಂದ ಕೊಟ್ಟಿಗಲ್ಲಿದ್ದ ಎತ್ತು ಸಾವು.

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಆಕಸ್ಮಿಕ ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳು ಸುಟ್ಟಿರುವ ದಾರುಣ ಘಟನೆ ಜರುಗಿದೆ.

ಜಮೀನನಲ್ಲಿ ಕೆಲಸ ಮಾಡಿ ಬಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ರೈತ ಕೊಟ್ಟಿಗೆಯಲ್ಲಿ ಅಳವಡಿಸಲಾದ ವಿದ್ಯುತ್ ವೈರನಲ್ಲಿ ಬೆಂಕಿ ಕಾಣಿಸಿಕೊಂಡು ಪರಿಣಾಮ ಬೆಂಕಿ ತಗುಲಿದ್ದರಿಂದ ಎತ್ತುಗಳು ಸುಟ್ಟು ಸಾವು‌.

ಎರಡರಲ್ಲಿ ಒಂದು ಸಾವನ್ನಪ್ಪಿದ್ದು ಇನ್ನೊಂದು ಎತ್ತನ್ನು ಸ್ಥಳಿಯರ ನೆರವಿನಿಂದ ಬದುಕಿಸಿಕೊಂಡಿದ್ದು ಗಂಭೀರವಾಗಿ ಗಾಯಗೊಂಡು ಬದುಕಿದೆ.ರೈತ ಶ್ರೀಶೈಲ್ ಮಾಹಮನಿ ಎಂಬುವರಿಗೆ ಸೇರಿದ ಎತ್ತುಗಳಾಗಿವೆ ಕಳೆದ ಎರಡು ತಿಂಗಳ ಹಿಂದೆ ಜಮೀನು ಉಳುಮೆಗಾಗಿ ೧ ಲಕ್ಷ ೪೮ ಸಾವಿರ ಹಣ ಕೊಟ್ಟು ಖರೀದಿ ಮಾಡಿ ತಂದಿದ್ದ ಜಾನುವಾರುಗಳು ಬೆಂಕಿಯ ಕೆನ್ನಾಲೆಗೆ ಮೃತಪಟ್ಟಿವೆ.

ಇದರಿಂದ ಎತ್ತುಗಳು ಸಾವನ್ನಪ್ಪಿದ್ದು ರೈತನಿಗೆ ಶಾಖ್ ನೀಡಿದಂತಾಗಿದ್ದು ಕೊಟ್ಟಿಗೆಯಲ್ಲಿದ್ದ ದನದ ಮೇವು ಹಾಗೂ ಕೃಷಿ ಪರಿಕರಗಳು ಸುಟ್ಟು ಕರಕಲಾಗಿವೆ, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ನಮ್ಮ ಜೀವನಕ್ಕೆ ಸರ್ಕಾರ ನೆರವು ನೀಡಬೇಕೆಂದು ರೈತ ಶ್ರೀಶೈಲ್ ಮನವಿ ಮಾಡಿಕೊಂಡರು. ಕೆಂಭಾವಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular