ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಯಕ್ತಾಪೂರ ಗ್ರಾಮದ ಗುತ್ತಿ ಬಸವಣ್ಣನ ಜಾತ್ರೆಯಲ್ಲಿ ಕಾಲು ತುಳಿದ ಆರೋಪದ ಮೇಲೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಜಾತ್ರೆ ನೋಡಲೆಂದು ಬಂದಿದ್ದ ಪಕ್ಕದ ಐನಾಪೂರ ಗ್ರಾಮದ ಯುವಕರ ಮತ್ತು ಮಹಿಳೆಯರ ಮೇಲೆ ಕಾಲು ತುಳಿತ ನೆಪವೊಡ್ಡಿ ಯಕ್ತಾಪುರ ಗ್ರಾಮದ 15 ಕ್ಕಿತ ಹೆಚ್ಚು ಯುವಕರ ಗುಂಪೊಂದು ಏಕಾಏಕಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಬಡಿಗೆ ಮತ್ತು ಕಲ್ಲುಗಳಿಂದ ಹೊಡೆದು 4 ಜನರಿಗೆ ಗಂಭೀರ ಗಾಯಗಳಾಗಿದ್ದು ಪರಶುರಾಮ 28 ವರ್ಷ ರಂಗಣ್ಣ 20 ವರ್ಷ ಯಂಕಮ್ಮ 45 ವರ್ಷ ಶಾಂತಮ್ಮ 48 ವರ್ಷ ಎಂದು ತಿಳಿದು ಬಂದಿದೆ.ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಕೆಂಭಾವಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.
ಪರಶುರಾಮ ಮತ್ತು ರಂಗಣ್ಣ ಇವರಿಗೆ ತಲೆಗೆ ಜೋರಾದ ಹೊಡೆತ ಬಿದ್ದಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಹಾಪೂರ ಸರ್ಕಾರಿ ತಾಲೂಕ ಆಸ್ಪತ್ರೆಗೆ ಕಳಿಸಲಾಗಿದೆ.
ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.


