ಸಿಂದಗಿ : ಇದೇ ಸೆ 8ರಂದು ರೈತ ವಿರೋಧಿ ಸರ್ಕಾರದ ನಡೆ ಖಂಡಿಸಿ ಸಿಂದಗಿಯಲ್ಲಿ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು .
ಸಿಂದಗಿ ಪಟ್ಟಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಶಾಸಕ ಅಶೋಕ ಮನಗೂಳಿಯವರು ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ. ನನ್ನ ಅವಧಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಕತ್ತರಿ ಹಾಕಲಾಗಿದೆ. ಅವರ ಆಪ್ತ ಸಹಾಯಕ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾನೆ. ಕಾರಣ ಅಂಬೇಡ್ಕರ ನಿಗಮ ಸರಳ ಸಾಲದ ಫಲಾನುಭವಿ. ವಿಷ ಸೇವಿಸಿ ಆಸ್ಪತ್ರೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ . ಶಾಸಕರ ದ್ವೇಷದ ರಾಜಕಾರಣ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.


