ಶೃಂಗೇರಿ : ಕಳೆದ ಹಲವುದಿನಗಳಿಂದ ಸುರಿಯುವ ಜಡಿ ಮಳೆ ಮನುಷ್ಯನ ಜೀವನವನ್ನು ಅಲ್ಲೊಲ್ಲಕಲ್ಲೋಲ ಮಾಡಿದೆ. ಈ ಬಾರಿ ಮಂಗಳೂರಿನ ಜನತೆಗೆ ಗುಡ್ಡ ಕುಸಿತ ದಿಗ್ಬಂಧನಮಾಡಿದಂತಾಗಿದೆ. ಆ ಕಡೆ ಈ ಕಡೆ ಎಲ್ಲಾ ಕಡೆ ರಸ್ತೆ ಕುಸಿದು ಸಮಸ್ಯೆಉಂಟಾಗಿದೆ. ಪ್ರವಾಸಿಗರಿಗೆ ಮಳೆ ಕಡಿಮೆ ಆಗೋ ತನಕ ಸಂಚರಿಸದಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದೀಗ ಮಂಗಳೂರಿನಿಂದ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಮ್ಮಾರು ಗ್ರಾಮ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು ಚಿಕ್ಕಮಗಳೂರಿನ ಪ್ರಸಿದ್ಧ ಯಾತ್ರಾ ಸ್ಥಳ ಶೃಂಗೇರಿಗೆ ರಸ್ತೆಯುದ್ದಕ್ಕೂ ಮಣ್ಣು ತುಂಬಿದೆ. ಗುಡ್ಡ ಕುಸಿತದಿಂದಾಗಿ ದೊಡ್ಡ ದೊಡ್ಡ ಮರಗಳು, ಕಲ್ಲು, ಬಂಡೆಗಳು ರಸ್ತೆಗೆ ಬಿದ್ದಿದ್ದುಜತೆಗೆ ಬೃಹತ್ ಬಿರುಕೊಂದು ಬಿಟ್ಟಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಬಿಡುವಿಲ್ಲದೇ ಸಂಚಾರ ಮಾಡುತ್ತಿರುವುದರಿಂದ ಕಟ್ಟೆಚ್ಚರ ನೀಡಲಾಗಿದೆ.ಕಳಸ, ಕುದುರೆಮುಖ, ಕೆರೆಕಟ್ಟೆ ಭಾಗದಲ್ಲಿ ಮಳೆ ಆರ್ಭಟ ತಗ್ಗಿದೆ. ಹೆಬ್ಬಾಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿವು ತಗ್ಗಿದೆ. ಕಳೆದ ಎರಡು ದಿನದಿಂದ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ಪರಿಣಾಮವಾಗಿ ಹೆಬ್ಬಾಳೆ ಸೇತುವೆ ಶಿಥಿಲಗೊಂಡಿದೆ. ಒಟ್ಟಿನಲ್ಲಿ ವಾಹನ ಸವಾರರು ಜಾಗ್ರತೆ ವಹಿಸಿ ಸಂಚರಿಸುವುದು ಉತ್ತಮವಾಗಿದೆ.


