Thursday, July 23, 2026
Homeರಾಜ್ಯಶಿವಮೊಗ್ಗ : ರಾಶಿ ಅಡಿಕೆ ತೂಕದಲ್ಲಿ ಮೋಸ,ವ್ಯಾಪಾರಿಗೆ 20 ಲಕ್ಷ ರೂ. ದಂಡ ಹಾಕಿದ ಗ್ರಾಮಸ್ಥರು.

ಶಿವಮೊಗ್ಗ : ರಾಶಿ ಅಡಿಕೆ ತೂಕದಲ್ಲಿ ಮೋಸ,ವ್ಯಾಪಾರಿಗೆ 20 ಲಕ್ಷ ರೂ. ದಂಡ ಹಾಕಿದ ಗ್ರಾಮಸ್ಥರು.

ಶಿವಮೊಗ್ಗ : ರೈತರಿಂದ ಅಡಿಕೆ ಖರೀದಿಸುವಾಗ ತೂಕದಲ್ಲಿ ಮೋಸ ಮಾಡಿದ ಪರಿಣಾಮ ವ್ಯಾಪಾರಿಯೊಬ್ಬನಿಗೆ ಗ್ರಾಮಸ್ಥರು 20 ಲಕ್ಷ ರೂ. ದಂಡ ಹಾಕಿದ ಘಟನೆ ವರದಿಯಾಗಿದೆ.

ಭದ್ರಾವತಿ ತಾಲೂಕಿನ ಅರಹತೊಳಲಿ ಗ್ರಾಮದಲ್ಲಿ ಘಟನೆ ನಡೆದಿದ್ದು ರೈತರಿಗೆ ವಂಚಿಸುತ್ತಿದ್ದ ವ್ಯಾಪಾರಿಗೆ ಗ್ರಾಮಸ್ಥರು ತಕ್ಕ ಪಾಠ ಕಲಿಸಿದ್ದಾರೆ. ಅಡಿಕೆ ತೂಕದಲ್ಲಿ ಮೋಸ ಮಾಡಿದ ವ್ಯಾಪಾರಿಗೆ ಗ್ರಾಮದ ಸಮಿತಿಯಿಂದ ಬರೋಬ್ಬರಿ 20 ಲಕ್ಷ ರೂ. ದಂಡ ವಿಧಿಸಿದ್ದಾರೆ.ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ 3 ಕೆ.ಜಿ ಮೋಸ ಮಾಡಿದ್ದಾನೆ.ಇದನ್ನು ಗಮನಿಸಿದ ರೈತರು ಅಡಿಕೆ ವರ್ತಕ ತಟ್ಟೆಹಳ್ಳಿ ದೀಲಿಪ್ ಎಂಬನನ್ನು ಹಿಡಿದು ಗ್ರಾಮದ ದೇವಾಲಯಕ್ಕೆ 20 ಲಕ್ಷ ಕಟ್ಟಿಸಿ ಗ್ರಾಮಸ್ಥರು ದಂಡ ವಸೂಲಿಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular