Saturday, January 17, 2026
Flats for sale
Homeಜಿಲ್ಲೆಶಿವಮೊಗ್ಗ : ಮಹಾಮಾರಿ ಡೆಂಗ್ಯೂಗೆ ರಿಪ್ಪನ್ ಪೇಟೆಯಲ್ಲಿ ಮಹಿಳೆ ಬಲಿ.

ಶಿವಮೊಗ್ಗ : ಮಹಾಮಾರಿ ಡೆಂಗ್ಯೂಗೆ ರಿಪ್ಪನ್ ಪೇಟೆಯಲ್ಲಿ ಮಹಿಳೆ ಬಲಿ.

ಶಿವಮೊಗ್ಗ : ರಾಜ್ಯದಲ್ಲಿ ಮಹಮಾರಿ ಡೆಂಗ್ಯೂವಿನ ರುದ್ರವತಾರ ಹೆಚ್ಚಾಗಿದ್ದು ದಿನದಿಂದ ದಿನಕ್ಕೆ ಹಲವು ಬಡ ಜೀವಗಳನ್ನು ಬಲಿ ಪಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ನಿವಾಸಿ ರಶ್ಮಿ ಆರ್ ನಾಯಕ್ (42) ಮೃತಪಟ್ಟಿದ್ದಾರೆ. ಕಳೆದ ಕಳೆದ 15-20 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ರಶ್ಮಿ ಕೊನೆಯುಸಿರೆಳೆದಿದ್ದಾರೆ. ಅವರು ಪತಿ ಹಾಗೂ ಇಬ್ಬರು ಪುತ್ರರರನ್ನು ಅಗಳಿದ್ದಾರೆ.

ಈಗಾಗಲೇ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಸಾರ್ವಜನಿಕರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular