Saturday, March 14, 2026
Flats for sale
Homeರಾಜ್ಯಶಿವಮೊಗ್ಗ : ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ : ಧರೆಗುರುಳಿದ ವಿದ್ಯುತ್ ಕಂಬ,ಜನಜೀವನ ಅಸ್ಥವ್ಯಸ್ಥ.

ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ : ಧರೆಗುರುಳಿದ ವಿದ್ಯುತ್ ಕಂಬ,ಜನಜೀವನ ಅಸ್ಥವ್ಯಸ್ಥ.

ಶಿವಮೊಗ್ಗ : ಧಾರಾಕಾರ ಮಳೆಯಿಂದ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಳೆಬಾಗಿಲು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದು ಹೊಳೆಬಾಗಿಲು, ಕಳಸವಳ್ಳಿ, ತುಮರಿ ರಸ್ತೆಗಳು ಕೆಲಹೊತ್ತು ಸಂಪೂರ್ಣ ಸಂಚಾರ ದಟ್ಟಣೆ ಉಂಟಾಯಿತು. ಹೊಸನಗರ ಸಾಗರ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗುಡ್ಡ ಕುಸಿತವಾಗಿದೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ದಾಖಲೆಯ 300 ಮಿಲಿ ಮೀಟರ್ ಮಳೆಯಾಗಿದು ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳುಉಕ್ಕಿ ಹರಿಯುತ್ತಿದ್ದು ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ .

ಜಿಲ್ಲೆಯ ಆಗುಂಬೆ ಭಾಗದಲ್ಲಿ ಧಾರಾಕಾರ ಮಳೆಯ ಪರಿಣಾಮ ಯಕ್ಷಗಾನ ಕಲಾವಿ ಹೊನ್ನೆತಾಳು ಗ್ರಾಮದ ನಂದನ್ ಶೆಟ್ಟಿ ಎಂಬುವರ ಮನೆ ಕುಸಿತಮನೆ ಕುಸಿತಗೊಂಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೆತಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಅದೃಷ್ಟ ವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮನೆ ಕಳೆದುಕೊಂಡ ಕುಟುಂಬಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular