Wednesday, November 5, 2025
Flats for sale
Homeರಾಜಕೀಯಶಿವಮೊಗ್ಗ : ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಈಶ್ವರಪ್ಪ ಸ್ಪರ್ಧೆ ..?

ಶಿವಮೊಗ್ಗ : ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಈಶ್ವರಪ್ಪ ಸ್ಪರ್ಧೆ ..?

ಶಿವಮೊಗ್ಗ : ವಿಧಾನ ಸಭೆ ಸದಸ್ಯರಾಗಿರುವವರು ತ್ಯಜಿಸಿ ಲೋಕಸಭೆಗೆ ಸ್ಪರ್ಧಿಸುವುದು ನಿಜವಾಗಿಯೂ ಕೇದಕರ. ಮುಖ್ಯಮಂತ್ರಿ ಆದರೂ ಅಧಿಕಾರ ಇಲ್ಲದಿದ್ದಾಗ ಶಾಸಕರಾಗಿ ಇರುವಾಗ ಲೋಕಸಭೆಗೆ ಸ್ಪರ್ದಿಸುವುದು ಕಾರ್ಯಕರ್ತರಿಗೆ ಬೇಸರದ ಸಂಗತಿ ಇಂತಹ ಸಮಯದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವುದು ನಿಜವಾದ ತ್ಯಾಗ ಆದರೆ ಈಶ್ವರಪ್ಪ ರವರ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗದ ಬಂಜಾರ ಕನ್ವೆನ್ಷನ್​ ಹಾಲ್​ನಲ್ಲಿ ಇಂದು ಈಶ್ವರಪ್ಪ ತಮ್ಮ ಬೆಂಬಲಿಗರ ಸಭೆ ನಡೆಸಿ ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ . ಬಳಿಕ ಮಾತನಾಡಿದ ಈಶ್ವರಪ್ಪ, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುವುದಿಲ್ಲ ಎನ್ನುತ್ತಲ್ಲೇ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಹಿಂದುತ್ವ ಹಾಗೂ ಪಕ್ಷದ ಸಿದ್ಧಾಂತ ಪರವಿರುವ ನನ್ನನ್ನು ಬೆಂಬಲಿಸಬೇಕು. ಚುನಾವಣೆ ವೇಳೆ ಜಾತಿ ವಿಚಾರ ಪ್ರಬಲವಾಗಿ ಚರ್ಚೆಯಾಗುತ್ತದೆ, ಎಲ್ಲಾ ಸಮುದಾಯದ ಮುಖಂಡರನ್ನು ಸಂಪರ್ಕಿಸಿ ನಿರ್ಧರಿಸಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ನಾನು ಗೆದ್ದರೆ ಮೋದಿಯನ್ನೇ ಬೆಂಬಲಿಸುತ್ತೇನೆ, ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶ್ರಮಿಸೋಣ. ಮೋದಿ ಪ್ರಧಾನಿಯಾದ ನಂತರ ನಾವೆಲ್ಲರೂ ಸೇರಿ ಸಂಭ್ರಮಿಸೋಣ. ನಮಗೆ ಮೋದಿಯೇ ಮುಖ್ಯ ಎಂಬ ಘೋಷಣೆಯ ಮೂಲಕ ಬಂಡಾಯವೆದ್ದಿದ್ದಾರೆ.

ಒಂದು ಕುಟುಂಬದ ಕೈಯಲ್ಲಿ ಬಿಜೆಪಿ ಸಿಗಬಾರದು. ರಾಜ್ಯದ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ನೀವು ಒಂದೂವರೆ ತಿಂಗಳು ಸಮಯ ಕೊಡಬೇಕು. ಮೋದಿ‌ ಆಸೆಗೆ ತಕ್ಕಂತೆ ರಾಜ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ಗೆಲ್ಲಬೇಕು. ರಾಜ್ಯದಲ್ಲಿ ಟಿಕೆಟ್ ನೀಡುವವರೊಂದಿಗೆ ನನ್ನನ್ನು ಹೋಲಿಸಿ ನಾನು ಅವರಿಗಿಂತ ಒಂದು ಗುಲಗಂಜಿಯಷ್ಟಾದರೂ ಹೆಚ್ಚಿದ್ದೇನೆ. ಎಲ್ಲಾ ಸಮಾಜದವರ ನೂರಾರು ಕರೆಗಳು ಬರುತ್ತಿವೆ. ಅವರೆಲ್ಲರ ಕಳಕಳಿ ನನಗೆ ಅರ್ಥವಾಗುತ್ತದೆ ಎಂದು ಕೆ.ಎಸ್ ಈಶ್ವರಪ್ಪ ತಮ್ಮ ಚುನಾವಣಾ ಯುದ್ಧ ಘೋಷಿಸಿದ್ದಾರೆ.ಯಡಿಯೂರಪ್ಪ ಎದೆ ಬಗೆದರೆ ಒಂದು ಕಡೆ ಇಬ್ಬರು ಮಕ್ಕಳು ಇನ್ನೊಂದು ಕಡೆ ಶೋಭಾ ಕರಂದ್ಲಾಜೆ ಇದ್ದಾರೆ ಎಂದು ನಾನೂ ಹೇಳುತ್ತಿಲ್ಲ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂತೇಶ್ ಹಾವೇರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾನೆ ಎಂದು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪ್ರಸ್ತಾಪ ಮಾಡಲಾಗಿತ್ತು. ಬಿಎಸ್ ವೈ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಚುನಾವಣೆ ಸಮಿತಿಯಲ್ಲಿ ಕಾಂತೇಶ್ ಹೆಸರು ಪ್ರಸ್ತಾಪವಾಗಿತ್ತು. ಆದರೆ ಬೊಮ್ಮಾಯಿ ಹೆಸರೂ ಹೇಗೆ ಬಂತು ಗೊತ್ತಿಲ್ಲ .ಅದೊಂದು ಕೆಟ್ಟ ರಾಜಕೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ಮೂಲಕ ಬಿಜೆಪಿ ಯಲ್ಲಿ ಬಂಡಾಯದ ದಗೆ ಏರುತ್ತಿದ್ದು ಯಾರು ಇದಕ್ಕೆ ಇತಿಶ್ರೀ ಆಡುತ್ತಾರೋ ಮುಂದೊಂದು ದಿನ ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular