ಶಿವಮೊಗ್ಗ : ಬಿಜೆಪಿ ರೆಬೆಲ್ ನಾಯಕ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಪತ್ರಿಕಾಗೋಷ್ಠಿ ಕರೆದಿದ್ದು ಪತ್ರಿಕಾಗೋಷ್ಠಿಯಲ್ಲಿ ರೆಬೆಲ್ ನಾಯಕ ಕೆ.ಎಸ್. ಈಶ್ವರಪ್ಪ ಬಿ.ಎಸ್ ಯೆಡಿಯೂರಪ್ಪ ಕುಟುಂಬದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನನ್ಮನ್ನು ಪಕ್ಷದಿಂದ ಉಚ್ಚಾಟಿಸಿದ್ದಕ್ಕೆ ವಿಜಯೇಂದ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ ಅವರು ನಾನು ಕಟ್ಟಿ ಬೆಳೆಸಿದ ಪಕ್ಷ ಇದು,ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಈ ಮೂವರು ಬಹಳಷ್ಟು ಗೊಂದಲ ಮೂಡಿಸುತ್ತಿದ್ದು ಈ ಗೊಂದಲಗಳಿಗೆ ಈಗ ಉತ್ತರ ಸಿಕ್ಕಿದೆ ಎಂದು ಹೇಳಿದರು.
ಹೊಸನಗರ ಭಾಗದಿಂದ ಅನೇಕ ಜನರು ನನ್ನನ್ನು ಬೆಂಬಲಿಸಲು ಬಂದಿದ್ದು,ರಾಷ್ಟ್ರಭಕ್ತ ಬಳಗ ಸೇರ್ಪಡೆಗೊಂಡಿದ್ದಾರೆ. ನನ್ನ ಚಿನ್ಹೆ ಎರಡು ಕಬ್ಬು ಇರುವ ರೈತ. ಈ ರೈತನ ಚಿನ್ಹೆ ಸಿಗಲು ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ನೋ ಗೊತ್ತಿಲ್ಲ ನಾಳೆಯಿಂದ ಚಿನ್ಹೆ ಮೂಲಕ ಎಲ್ಲೆಡೆ ಪ್ರಚಾರ ಕಾರ್ಯ ನಡೆಸುತ್ತೇನೆ ಎಂದು ಹೇಳಿದರು.
ಬಹಳ ಚುನಾವಣೆಗೆ ನಿಲ್ತಿರೋ ಇಲ್ವೋ ಎಂದು ಬಹಳಷ್ಟು ಜನರಲ್ಲಿ ಗೊಂದಲವಿತ್ತು.ಎಲ್ಲಾ ಗೊಂದಲಕ್ಕೂ ಇಂದು ಉತ್ತರ ಸಿಕ್ಕಿದೆ ಎಂದರು .ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ರು,ಅವರನ್ನೇ ಹೋಗಿ ಅವರ ಕಾಲು ಹಿಡಿದು ಮತ್ತೆ ಬಿಜೆಪಿಗೆ ಕರೆ ತಂದಿದ್ದಾರೆ, ಇದು ತಾತ್ಕಾಲಿಕವಾಗಿ ನಾನು ಪಕ್ಷದಿಂದ ಹೊರ ಇದ್ದೆನೆ ಅಷ್ಟೇ, ಕುತಂತ್ರದಿಂದ ನಾನು ಈಗ ಬಿಜೆಪಿಯಿಂದ ಹೊರಬಂದಿದ್ದೆನೆ, ಷಡ್ಯಂತ್ರದಿಂದ ನಾನು ಬಿಜೆಪಿಯಿಂದ ಹೊರಬಂದಿದ್ದೆನೆ.
ಒಬ್ಬ ಎಳಸು ರಾಜ್ಯಾಧ್ಯಕ್ಷ ನನ್ನನ್ನು ಸಸ್ಪೆಂಡ್ ಮಾಡಿದ್ದಾರೆ,ಬಿಜೆಪಿ ಬಗ್ಗೆ ಏನೂ ಗೊತ್ತಿಲ್ಲದೇ ಇರುವ ಒಬ್ಬ ವ್ಯಕ್ತಿ ನನಗೆ ಬಿಜೆಪಿಯಿಂದ ಹೊರ ಹಾಕಿದ್ದಾರೆ.ಈ ರೀತಿ ಹಲವಾರು ಜನರು ನನಗೆ ಫೋನ್ ಮಾಡಿ ಹೇಳುತ್ತಿದ್ದಾರೆ.ಇದು ತಾತ್ಕಾಲಿಕ ಬೆಳವಣಿಗೆ ಅಷ್ಟೇ.ನಾನು ಮತ್ತೆ ಬಿಜೆಪಿಗೆ ಸೇರುವವನೇ ಇದನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಯಡಿಯೂರಪ್ಪ ಕೆಜೆಪಿಗೆ ಹೋಗಿ ಬಂದಿದ್ದಾರೆ ,ಅವರು ಡೂಪ್ಲೀಕೇಟ್, ನಾನು ಒರಿಜಿನಲ್ ಯಡಿಯೂರಪ್ಪ ಕೆಜೆಪಿ ಜೊತೆಗೆ ಹೋದಾಗ ಟಿಪ್ಪು ಸುಲ್ತಾನ್ ಜಯಂತಿಯಂದು ಟೋಪಿ ಹಾಕಿಕೊಂಡು ಹೋಗಿದ್ದರು.ಅವರಿಗೆ ನೈತಿಕತೆ ಇಲ್ಲ ಎಂಬುದು ಸಾಬೀತಾಗಿದೆ. ನಾನು ಗೆದ್ದ ಕೂಡಲೇ ಅವರಪ್ಪನೇ ಬಿಜೆಪಿಗೆ ಕರೆದುಕೊಂಡು ಹೋಗ್ತಾನೆ.ವಿಜಯೇಂದ್ರ 3 ಗಂಟೆ ಆಗೋದೆ ಕಾಯುತ್ತಿದ್ದ ಅನಿಸುತ್ತೆ ನನ್ನನ್ನು ಉಚ್ಚಾಟಿಸಲು ಕಾಯುತ್ತಿದ್ದ ಎನಿಸುತ್ತೆ ಎಂದು ಹೇಳಿದರು .
ಬಳಿಕ ನೇಹಾ ಹತ್ಯೆ ವಿಚಾರ ಮಾತನಾಡಿದ ಅವರು ಮುಖ್ಯಮಂತ್ರಿ, ಹಾಗೂ ಸುರ್ಜೇವಾಲಾ ಹೇಳಿಕೆ ನನಗೆ ಆಶ್ಚರ್ಯ ತಂದಿದೆ. ನಿನ್ನೆ ರಾಜ್ಯದಲ್ಲಿ ಮತ್ತೊಂದು ಯುವತಿ ಮೇಲೆ ಮುಸಲ್ಮಾನ್ ಯುವಕ ಹಲ್ಲೆ ಮಾಡಿದ್ದಾನೆ. ಎಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರವಿರುತ್ತೋ, ಅಲ್ಲಿಯವರೆಗೆ ಮುಸಲ್ಮಾನರ ಓಲೈಕೆ ಮಾಡಲಾಗುತ್ತದೆ.ಕಾಂಗ್ರೆಸ್ ನ್ನು ಕಿತ್ತೊಗೆಯುವುದೇ ಇದಕ್ಕೆ ಪರಿಹಾರ. ಕಾಂಗ್ರೆಸ್ ನ್ನು ರಾಜ್ಯದಿಂದಲೂ ಕಿತ್ತೊಗೆಯಬೇಕು ಎಂದು ಸಿದ್ದರಾಮಯ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.


