ಶಿವಮೊಗ್ಗ : ಫ್ರೀ ಬಸ್ ಯೋಜನೆಯಿಂದ ಹಣವಿಲ್ಲದೆ ಕೆ.ಎಸ್.ಆರ್.ಟಿ.ಸಿ. ಬಸ್ಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಚಲಿಸುತ್ತಿರುವಾಗಲೇ ಬಸ್ ನ ಸ್ಟೇರಿಂಗ್ ತುಂಡಾದ ಘಟನೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಅತಿದೊಡ್ಡ ಅನಾಹುತ ತಪ್ಪಿದ್ದು 50 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಶಿವಮೊಗ್ಗದಿಂದ ತೀರ್ಥಹಳ್ಳಿಯ ಕಟ್ಟೆಹಕ್ಲುವಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ನ ಸ್ಟೇರಿಂಗ್ ತುಂಡಾಗಿದ್ದು ಪ್ರಯಾಣಿಕರಿಗೆ ದಿಗಿಲು ಬಡಿದಂತಾಗಿದೆ.


