Thursday, March 12, 2026
Flats for sale
Homeಕ್ರೈಂಶಿವಮೊಗ್ಗ : ಊಟ ಬಡಿಸದ ಪತ್ನಿಯನ್ನು ಕುತ್ತಿಗೆ ಬಿಗಿದು ಹತ್ಯೆಗೈದ ಪತಿ ..!

ಶಿವಮೊಗ್ಗ : ಊಟ ಬಡಿಸದ ಪತ್ನಿಯನ್ನು ಕುತ್ತಿಗೆ ಬಿಗಿದು ಹತ್ಯೆಗೈದ ಪತಿ ..!

ಶಿವಮೊಗ್ಗ : ಪತ್ನಿಗೆ ಊಟ ಬಡಿಸಲು ಹೇಳಿದ್ದು ಪತ್ನಿ ಫೋನ್ನಲ್ಲಿ ಬ್ಯುಸಿ ಇದ್ದ ಹಿನ್ನೆಲೆ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ.ಮದ್ಯ ಸೇವಿಸಿಕೊಂಡು ಪತ್ನಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಬಿಗಿದು ಹತ್ಯೆಗೈದ ಘಟನೆ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬ್ಲಿಗೊಳದಲ್ಲಿ ನಡೆದಿದೆ.

ಗೌರಮ್ಮ (26) ಕೊಲೆಯಾದ ದುರ್ದೈವಿ ಗೃಹಿಣಿ.ಮನೋಜ್ ಪತ್ನಿ ಕೊಲೆಗೈದ ಆರೋಪಿ ಪತಿ.

ಪತ್ನಿ ಗೌರಮ್ಮ ಫೋನ್ ಬಳಕೆ ಸ್ವಲ್ಪ ಹೆಚ್ಚಾಗಿ ಮಾಡುತ್ತಿದ್ದಳಂತೆ. ಮೊನ್ನೆಯ ದಿನ ಪತಿ ಮನೋಜ್ ಊಟ ಬಡಿಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಕ್ಯಾರೇ ಎನ್ನದ ಗೌರಮ್ಮ ಫೋನ್​ನಲ್ಲಿ ಬ್ಯುಸಿ ಆಗಿದ್ದಳು. ಕೋಪಿಸಿಕೊಂಡ ಮನೋಜ್ ಹಲ್ಲೆಗೆ ಮುಂದಾಗಿದ್ದಾನೆ. ನಂತರ ಟವೆಲ್​​ನಿಂದ ಆಕೆಯ ಕುತ್ತಿಗೆ ಬಿಗಿದು ಉಸಿರು ನಿಲ್ಲಿಸಿದ್ದಾನೆ.

ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿದ್ದು ಆರೋಪಿ ಪತಿ ಮನೋಜ್ ನನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular