ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು ಮಾನಸಿಕ ನೆಮ್ಮದಿ ಇಲ್ಲದೆ ಇಂತಹ ಘಟನೆ ನಡೆಯಿತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಎಲ್ಲದಕ್ಕೂ ಹಣ ಇಲ್ಲದೆ ಜೀವನದಲ್ಲಿ ನೆಮ್ಮದಿ ಇಲ್ಲವೆಂಬುದು ನಿಜವಾದ ಮಾತು ಆದರೆ ಗಂಡ ಹೆಂಡಿರ ಜಗಳ ಕೂಸು ಬಡವಾಯಿತು ಎಂಬ ಮಾತಿನಂತೆ ಮನುಷ್ಯನು ತೀರಾ ಖಿನ್ನತೆಗೆ ಒಳಗಾದರೆ ಆತ್ಮಹತ್ಯೆಯ ಪ್ರಕರಣಗಳು ಹೆಚುತ್ತಿರುವುದಂತೂ ನಿಜ .
ಪೊಲೀಸರ ಸಮಯ ಪ್ರಜ್ಞೆಯಿಂದ 3 ಜೀವಗಳ ರಕ್ಷಣೆ ಮಾಡಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುಗ್ವೆ ಗ್ರಾಮದಲ್ಲಿ ನಡೆದಿದೆ.ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯನ್ನು ಪೊಲೀಸರು ರಕ್ಷಣೆಮಾಡಿದ್ದೂ ಜಿಲ್ಲೆಯ ಸಾಗರ ತಾಲೂಕಿನ ಅಣಲೇಕೊಪ್ಪ ನಿವಾಸಿಗಳಾದ ಪ್ರೀತಿ(13), ಪ್ರಜ್ವಲ್(9) ಹಾಗೂ ಸಂಗೀತಾ(33) ಆತ್ಮಹತ್ಯೆಗೆ ಯತ್ನಿಸಿದ್ದವರು ಎಂದು ತಿಳಿದುಬಂದಿದೆ.
ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನ ರಕ್ಷಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.