ಶಿರಾ : ನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆವರಣದಲ್ಲಿ ಇಂಜಿನಿಯರ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಟಿ.ಬಿ. ಜಯಚಂದ್ರ ವಿದ್ಯಾರ್ಥಿಗಳನ್ನು ಕುರಿತು ಇಂಜಿನಿಯರ್ ದಿನಾಚರಣೆಯ ಮಹತ್ವ ಮತ್ತು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಬಾಲ್ಯದ ಬಗ್ಗೆ, ಅವರ ಕೊಡುಗೆಗಳ ಬಗ್ಗೆ ತಿಳಿಸಿದರು.
ಇಂದಿನ ಇಂಜಿನಿಯರ್ಗಳ ಚಂದ್ರಯಾನ ಮತ್ತು ಸೂರ್ಯ ಯಾನ ಯಶಸ್ವಿ ಸಾಧನೆಯ ಬಗ್ಗೆ ಮತ್ತು ಶ್ರೀಸಾಮಾನ್ಯರು ತಾಂತ್ರಿಕ ವಿಷಯಗಳಲ್ಲಿ ಪರಿಣೀತಿ ಹೊಂದಿರುವ ಬಗ್ಗೆ ವಿವರಿಸಿದರು. ಎಲ್ಲಾ ವಿದ್ಯಾರ್ಥಿಗಳು ಸರ್. ಎಂ. ವಿ ಅವರ ಸನ್ಮಾರ್ಗದಲ್ಲಿ ನಡೆದು ದೇಶಕ್ಕೆ ಮತ್ತು ರಾಜ್ಯಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕೆಂದು ಕರೆ ನೀಡಿದರು.
ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಮೇಜರ್ ಶ್ರೀ ಅನಿಲ್ ಕುಮಾರ್ ಅಧ್ಯಕ್ಷತೆಯನ್ನು ರವರು ವಹಿಸಿದ್ದರು ಕಾರ್ಯಕ್ರಮದಲ್ಲಿ ನಗರ ಸಭೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಕಾಂತ್. ಕೆ,
ಭದ್ರಾ ಮೇಲ್ದಂಡೆ ಯೋಜನೆಯ ಸಹಾಯಕ ನಿರ್ದೇಶಕಿ ರಮ್ಯ ಮತ್ತಿತರ ಹಾಜರಿದ್ದರು


