ಶಿರಾ ; ನಗರಸಭೆಯಿಂದ ಪಡೆದ ವಾಣಿಜ್ಯ ಮಳಿಗೆಗಳಿಗೆ ಎಷ್ಟೇ ಗಡುವು ಕೊಟ್ಟರೂ ಬಾಡಿಗೆ ಕಟ್ಟದೆ ಸತಾಯಿಸುತ್ತಿದ್ದ ಬಾಡಿಗೆದಾರರ ಅಂಗಡಿಗಳಿಗೆ ನಗರಸಭೆ ಕಮಿಷನರ್ ಈಚೆಗೆ ಬೀಗ ಜಡಿದಿದ್ದಾರೆ.
ನಗರಸಭೆ ವತಿಯಿಂದ ನಿರ್ಮಾಣ ಮಾಡಿರುವ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ವಸೂಲಿಗಾಗಿ ಮಂಗಳವಾರ
ಕಾರ್ಯಾಚರಣೆ ನಡೆಸಿದ ನಗರಸಭೆ ಆಯುಕ್ತರು, ಪ್ರಾರಂಭದಿಂದಲೂ ಬಾಡಿಗೆ ಕಟ್ಟದೆ ಹೆಚ್ಚಿನ ಬಾಕಿ ಉಳಿಸಿಕೊಂಡಿದ್ದ ಸುಮಾರು 67 ಅಂಗಡಿಗಳಿಗೆ ಬೀಗ ಹಾಕಿಸಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಸಂಕಿರ್ಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕವಾಗಿ ಹರಾಜು ಪ್ರಕ್ರಿಯೆ ನಡೆಸಿ ಬಾಡಿಗೆಗೆ ನೀಡಿದ್ದರು.ಬಾಡಿಗೆಗೆ ಪಡೆದಿರುವಂತಹ ಮಾಲೀಕರು ಬಾಡಿಗೆ ಕಟ್ಟದೆ ನಿರ್ಲಕ್ಷ ತೋರಿ ಸತಾಯಿಸುತ್ತಿದ್ದರು, ಹಲವು ಬಾರಿ ಎಚ್ಚರಿಕೆಯ ನೋಟಿಸ್ ಕೊಟ್ಟರೂ ಬಾಡಿಗೆ ಕಟ್ಟಿರಲಿಲ್ಲ. ನೋಟಿಸ್‌ಗೆ ಸೊಪ್ಪು ಹಾಕದ ಕಾರಣ ಪೌರಾಯುಕ್ತರು ನಗರ ಸಿಬ್ಬಂದಿಯೊಂದಿಗೆ ಬಾಡಿಗೆ ವಸೂಲಿಯ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ವೇಳೆ 67ಕ್ಕೂ ಹೆಚ್ಚು ಅಂಗಡಿಯ ಆದರೆ ಅಂಗಡಿ ಪಡೆದ ಪ್ರಾರಂಭದಿಂದಲೂ ಬಾಡಿಗೆ ಕಟ್ಟದೆ ಮತ್ತು ಬೇರೆಯವರಿಗೆ ಬಾಡಿಗೆ ನೀಡಿ ಹಣ ಪಡೆದು ಬಾಡಿಗೆ ಕಟ್ಟದ ಅಂಗಡಿಗಳನ್ನು ಬೀಗ ಹಾಕಿಸಿದರು.
ಬಾಡಿಗೆ ಅಂಗಡಿಗಳಿಂದ ಸುಮಾರು ₹ ಐದೂವರೆ ಕೋಟಿಯಷ್ಟು ಬಾಡಿಗೆ ಹಣ ಬರಬೇಕಿತ್ತು, ನಗರಸಭೆ ಸಾಮಾನ್ಯ ಸಭೆಯ ನಿರ್ಣಾಯದಂದೆ ಬಾಡಿಗೆಯನ್ನು ಸಕಾಲಕ್ಕೆ ವಸೂಲಿ ಮಾಡುವಂತೆ, ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರಿಂದ ಕಮಿಷನರ್ ಬೀಗ ಹಾಕುವ ನಿರ್ಧಾರ ಕೈ ಕೊಂಡಿದ್ದಾರೆ.
ಬೀಗ ಹಾಕಿರುವ ಅಂಗಡಿಯ ಬಾಡಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟುವವರೆಗೂ ಬೀಗವನ್ನು ತೆಗೆಸುವುದಿಲ್ಲ. ಸದ್ಯ ಬಾಡಿಗೆ ಮತ್ತು ಅದರ ಬಡ್ತಿ ಮತ್ತು ಜಿ ಎಸ್ ಟಿ ಪಾವತಿಸುವಂತೆ ಇಲ್ಲದಿದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ತಿಳಿಸಿದ್ದಾರೆ.
ಬಾಡಿಗೆ ವಸೂಲಿ ಕಾರ್ಯಾಚರಣೆಯಲ್ಲಿ ನಗರಸಭೆಯ ಕಂದಾಯ ಇಲಾಖೆಯ ನೌಕರರು, ಸಿಬ್ಬಂದಿ ಪಾಲ್ಗೊಂಡಿದ್ದರು.