Friday, March 13, 2026
Flats for sale
Homeರಾಜ್ಯಶಿರಾ : ನಗರದಲ್ಲಿ ಸಾರಿಗೆ ಅಧಿಕಾರಿಗಳ ವ್ಯಾಪಕ ದಾಳಿ ಹಲವಾರು ವಾಹನ ವಶ.

ಶಿರಾ : ನಗರದಲ್ಲಿ ಸಾರಿಗೆ ಅಧಿಕಾರಿಗಳ ವ್ಯಾಪಕ ದಾಳಿ ಹಲವಾರು ವಾಹನ ವಶ.

ಶಿರಾ : ನಗರದಲ್ಲಿ ನಾನಾ ಭಾಗ ಗಳಲ್ಲಿ ಬೆಳ್ಳಂಬೆಳಗ್ಗೆ ದಾಳಿ ಆರಂಭಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಧಿಕಾರಿಗಳ ತಂಡ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಶಾಲಾ ವಾಹನ ಗಳು ಸೇರಿದಂತೆ ಜೆಸಿಬಿ ಆಟೋಗಳನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ತುಮಕೂರು ಆರ್.ಟಿ.ಒ. ಇನ್ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು ಪರವಾನಿಗೆ ಇಲ್ಲದೆ ಹಾಗೂ ಹದಿನೈದು ವರ್ಷಗಳ ಹಿಂದಿನ ವಾಹನಗಳನ್ನು ಹೊಡಿಸುತ್ತಿದ್ದ ಆಟೋ,ಬಸ್ ಮಾಲೀಕರಿಗೆ ಶಾಕ್ ಕೊಟ್ಟ ಆರ್.ಟಿ.ಓ.ಇನ್ಸ್ಪೆಕ್ಟರ್ ಶರೀಫ್. 15 ಆಟೋ, ಒಂದು ಶಾಲಾ ವಾಹನವನ್ನು ಸೀಜ್ ಮಾಡಿದ ಆರ್.ಟಿ.ಒ.ಅಧಿಕಾರಿ. ಎಫ್ಸಿ,ಇನ್ಸೂರೆನ್ಸ್,ಡಿ.ಎಲ್.ಇಲ್ಲದೆ ಓಡಾಡುತ್ತಿದ್ದ ವಾಹನಗಳು ಸೀಜ್ ಮಾಡಿದ್ದಾರೆ .

ತುಮಕೂರು ಜಿಲ್ಲೆಯ ಶಿರಾ ಟೌನ್ ನಲ್ಲಿ ಪೊಲೀಸರ ಸಹಯೋಗದೊಂದಿಗೆ ಕಾರ್ಯಚರಣೆ. ಬಹಳ ದಿನಗಳಿಂದ ಸಾರಿಗೆ ಇಲಾಖೆಗೆ ಕಣ್ಣುತಪ್ಪಿಸಿ ಸಂಚಾರಿಸುತ್ತಿದ್ದ ವಾಹನಗಳು. 5ಆಟೋ,ಒಂದು ಖಾಸಗಿ ಶಾಲೆಗೆ ಸೇರಿದ ಬಸ್ ಗಳನ್ನುಸಾರಿಗೆ ಇಲಾಖೆ ,ಅಧಿಕಾರಿಗಳು ವಶಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular