ಶಿರಾ:-ತಾಲ್ಲೂಕಿನ ಹೆಚ್ಚುತ್ತಿರುವ ಆಕ್ರಮ ಮದ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಮಹಿಳೆಯರ ದೂರ ನೀಡಿದರು ಪ್ರಯೋಜನವಿಲ್ಲ. ಎಂದು ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ನಮ್ಮ ಕುಟುಂಬ ಊಳಿಸಿ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಶಿರಾ ತಾಲ್ಲೂಕು ಪಂಚಾಯತ್ ಯಲ್ಲಿ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಶಾಖದಡು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ತಡೆಯುವಂತೆ ಮಹಿಳೆಯರು ಚಿಕ್ಕ ನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರಿಗೆ ಸಭೆಯಲ್ಲಿ ಮನವಿ ಸಲ್ಲಿಸಿದ್ದರು.
ಈ ಹಿಂದೆ ಹಲವಾರು ಬಾರಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಯುವಂತೆ ಮಹಿಳೆಯರು ಪೊಲೀಸರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಲಿಲ್ಲ ಹಿನ್ನೆಲೆಯಲ್ಲಿ ಶಾಸಕರು ಸಾರ್ವಜನಿಕ ಅಹವಾಲು ಸಭೆಯಲ್ಲಿ ಗ್ರಾಮದ ಹಲವಾರು ಮಹಿಳೆಯರು ತಮ್ಮ ಅಳಲನ್ನು ತೋಡಿ ಕೊಂಡರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಅದನ್ನು ತಡೆಯುವಂತೆ ಅಧಿಕಾರಿಗಳು ವಿಫಲರಾಗಿದ್ದಾರೆ ಸುಮಾರು ಜನಸಂಖ್ಯೆ ಹೊಂದಿರುವ ಶಾಖದಡು ಗ್ರಾಮವು ಸ್ಥಳೀಯವಾಗಿ ಯಾವುದೇ ಗಲಾಟೆಗಳಿಗೆ ಆಸ್ಪದವಿಲ್ಲದೆ ಗ್ರಾಮವೂ ಶಾಂತಿಯಿಂದ ಕೂಡಿತ್ತು. ಆದರೆ ಇತ್ತೀಚೆಗೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.
ಗ್ರಾಮದಲ್ಲಿ ಕೂಲಿ ಮಾಡುವ ಜನರೇ ಹೆಚ್ಚಾಗಿದ್ದು ನಿತ್ಯ ದುಡಿಮೆಯಿಂದ ಬರುವ ಹಣವನ್ನು ಮದ್ಯಕ್ಕೆ ಖರ್ಚು ಮಾಡುವುದಲ್ಲದೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಿತ್ಯ ಕುಡಿದು ಬಂದು ಮಹಿಳೆಯರು ಮತ್ತು ಮಕ್ಕಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಅಲ್ಲದೆ ಸಂಸಾರಗಳು ಬೀದಿ ಪಾಲಾಗುತ್ತಿವೆ. ಮನೆಗಳಲ್ಲಿ ನೆಮ್ಮದಿಗೆ ಭಂಗವಾಗಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕರು ಮದ್ಯದ ಚಟಕ್ಕೆ ಬಿದ್ದು ಸಾವುಗಳನ್ನು ಕಂಡಿದ್ದಾರೆ ಗ್ರಾಮದಲ್ಲಿಯೂ ಸಹ ಆಗಾಗ ಗಲಾಟೆಗಳು ನಡೆಯುತ್ತಿರುತ್ತವೆ ಎಂದು ಗ್ರಾಮದ ಮಹಿಳೆಯರು ದೂರಿದ್ದಾರೆ.
ನಂತರ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ದೂರವಾಣಿ ಮೂಲಕ ತಾವರೆಕೆರೆ ಪೊಲೀಸ್ ಠಾಣೆಗೆ ಮತ್ತು ಸ್ಥಳೀಯ ಅಬಕಾರಿ ಇಲಾಖೆಯ ಅಕ್ರಮ ಮಾರಾಟ ವಿರುದ್ಧ ಕ್ರಮಕ್ಕೆ ತಿಳಿಸಿದ್ದಾರೆ .


