Friday, March 13, 2026
Flats for sale
Homeಸಿನಿಮಾವಿಶಾಖಪಟ್ಟಣ : ಸ್ನೇಹಿತೆಯ ಮನೆಯಿಂದ ಚಿನ್ನ ಕದ್ದು ಪರಾರಿಯಾಗಿದ್ದ ತೆಲುಗು ನಟಿ ಸೆರೆ.

ವಿಶಾಖಪಟ್ಟಣ : ಸ್ನೇಹಿತೆಯ ಮನೆಯಿಂದ ಚಿನ್ನ ಕದ್ದು ಪರಾರಿಯಾಗಿದ್ದ ತೆಲುಗು ನಟಿ ಸೆರೆ.

ವಿಶಾಖಪಟ್ಟಣ : ಸ್ನೇಹಿತೆಯ ಮನೆಯಿಂದಲೇ ಚಿನ್ನ ಕದ್ದು ಗೋವಾಗೆ ಪರಾರಿಯಾಗಿದ್ದ ಸಿನಿಮಾ ನಟಿ ಸೌಮ್ಯಾ ಶೆಟ್ಟಿಯನ್ನು ವೈಜಾಗ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನಟಿ ಸೌಮ್ಯಾ ಶೆಟ್ಟಿಯು, ಭಾರತೀಯ ಅಂಚೆ ಇಲಾಖೆಯ ನಿವೃತ್ತ ನೌಕರ ಪ್ರಸಾದ್ ಬಾಬು ಅವರ ಮನೆಯಲ್ಲಿ ಚಿನ್ನ ಕಳವು ಮಾಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಆಕೆಯ ಬಳಿಯಿಂದ ಕಳವು ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನಟಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಸೌಮ್ಯಾ ಶೆಟ್ಟಿ ಮತ್ತು ಪ್ರಸಾದ್ ಬಾಬು ಅವರ ಮಗಳು ಮೌನಿಕಾ ಇಬ್ಬರೂ ಗೆಳತಿಯರು. ಚಲನಚಿತ್ರ ಆಡಿಷನ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸೌಮ್ಯಾ ಆಗಾಗ ಮೌನಿಕಾಳ ಭೇಟಿಗೆ ಮನೆಗೆ ಆಗಮಿಸುತ್ತಿದ್ದಳು.

ಈ ಸಲುಗೆಯಿಂದ ಆಕೆ ಪ್ರಸಾದ್ ಬಾಬು ಅವರ ಕುಟುಂಬದ ಆದಾಯದ ಮೂಲ, ಹಣ, ಒಡವೆಗಳನ್ನೆಲ್ಲ ಎಲ್ಲಿಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿ ಪಡೆದುಕೊಂಡಿದ್ದಳು ಎನ್ನಲಾಗಿದೆ.1 ಕೆಜಿ ಚಿನ್ನ ಕದ್ದ ಚಾಲಾಕಿ: ಮಗಳ ಗೆಳತಿ ಎನ್ನುವ ಕಾರಣಕ್ಕೆ ಪ್ರಸಾದ್ ಬಾಬು ಅವರ ಕುಟುಂಬವೂ ಸೌಮ್ಯಾ ಶೆಟ್ಟಿ ಮೇಲೆ ವಿಶ್ವಾಸವಿರಿಸಿತ್ತು. ಇದನ್ನೇ ಬಂಡವಾಳ ಮಾಡಿಕೊAಡ ಆಕೆ ಇತ್ತೀಚೆಗೆ ಮನೆಯಿಂದ ಸುಮಾರು 1 ಕೆಜಿ ಚಿನ್ನ ಕದ್ದಿದ್ದಳು. ಪ್ರಸಾದ್ ಬಾಬು ಅವರ ಕುಟುಂಬ ಮದುವೆಗೆಂದು ಹೊರ ಹೋಗಿದ್ದಾಗ ಈ ಕೃತ್ಯ ಎಸಗಿ ಗೋವಾಕ್ಕೆ ಪರಾರಿಯಾಗಿದ್ದಳು.

ಮದುವೆಯಿಂದ ಮರಳಿ ಬಂದ ಪ್ರಸಾದ್ ಬಾಬು ಕುಟುಂಬಕ್ಕೆ ಚಿನ್ನ ಕಳ್ಳತನವಾಗಿರುವ ವಿಷಯ ತಿಳಿದು ಬಂದಿತ್ತು. ಹೀಗಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಬೆರಳಚ್ಚು ತಜ್ಞರ ಸಹಾಯಗಳನ್ನು ಪಡೆದು ಸುಮಾರು 11 ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಿ ವಿಚಾರಣೆ ನಡೆಸಿದ್ದರು. ಈ ಆರೋಪಿಗಳ ಪಟ್ಟಿಯಲ್ಲಿ ಸೌಮ್ಯಾ ಶೆಟ್ಟಿ ಸಹ ಇದ್ದರು. ತನಿಖೆ ವೇಳೆ ಸೌಮ್ಯಾ ತಪ್ಪೊಪ್ಪಿಕೊಂಡಿದ್ದು ಆಕೆಯಿಂದ 74 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯಳಾಗಿರುವ ಸೌಮ್ಯಾ ಶೆಟ್ಟಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ತೆಲುಗಿನ ಯುವರ್ಸ್ ಲವಿಂಗ್ಲಿ',ದಿ ಟ್ರಿಪ್’ ಸಿನಿಮಾಗಳಲ್ಲಿ ನಟಿಸಿರುವ ಸೌಮ್ಯಾ ಶೆಟ್ಟಿ ಕೆಲವು ಕಿರು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾಳೆ. ಪ್ರಸ್ತುತ `ಶಿವಂ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ.

ಈಕೆ ಸೌಮ್ಯಾ ಕಿಲಂಪಲ್ಲಿ ಎಂಬ ಹೆಸರಿನಿAದಲೂ ಗುರುತಿಸ್ಪಡುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular