Sunday, July 26, 2026
Homeರಾಜ್ಯವಿಜಯಪುರ : ವಿಜಯಪುರದಲ್ಲಿ ಗಣಿಗಾರಿಕೆ ಮಾಡಿ ಲೂಟಿ ಹೊಡೆದದ್ದು ಸಂತೋಷ ಲಾಡ್.

ವಿಜಯಪುರ : ವಿಜಯಪುರದಲ್ಲಿ ಗಣಿಗಾರಿಕೆ ಮಾಡಿ ಲೂಟಿ ಹೊಡೆದದ್ದು ಸಂತೋಷ ಲಾಡ್.

ವಿಜಯಪುರ: ಬಳ್ಳಾರಿ ದಿವಾಳಿ ಮಾಡಿದ್ದು, ಎಲ್ಲ ಗಣಿಗಾರಿಕೆ ಮಾಡಿ ಸತ್ಯನಾಶ ಮಾಡಿದ್ದು ಸಂತೋಷ ಲಾಡ್ ಅವರೇ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ದೇಶ ದಿವಾಳಿ ಮಾಡಿದ್ದಾರೆ ಎಂಬ ಸAತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಮೋದಿಯವರ ಕಾರ್ಯಗಳಿಗೆ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ. ಅನೇಕ ರಾಷ್ಟ್ರಗಳು ಮೋದಿಯವರನ್ನು ಮಾಡಲ್ ಮಾಡಿದ್ದಾರೆ. ಜಿ-೨೦ ಸಭೆಯಲ್ಲಿ ಅನೇಕರು ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊAಡಿದ್ದಾರೆ. ಮೋದಿ ಅವರ ಬಗ್ಗೆ ಮಾತನಾಡುವ ಬಗ್ಗೆ ನೈತಿಕತೆ ಲಾಡ್‌ಗಿಲ್ಲ ಎಂದರು. ಜೆಡಿಎಸ್ ಹೊಂದಾಣಿಕೆಗೆ ಸ್ವಾಗತ ಎಂದು ಪ್ರತಿಕ್ರಿಯಿಸಿ, ಈ ಹಿಂದೆ ಮುಸ್ಲಿಮರು ಎಷ್ಟು ಜನ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ಹಾಕಿದ್ದರು, ಹಾಕಿದ್ದರೆ ನಿಖಿಲ್ಕು ಮಾರಸ್ವಾಮಿ ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರಿಗೂ ದೇವೇಗೌಡರಿಗೂ ಮುಸ್ಲಿಮರು ಮತ ಹಾಕಿಲ್ಲ. ಮುಸ್ಲಿಮರು ಪಕ್ಷ ಬಿಟ್ಟು ಬೇಕಾದರೆ ಹೋಗಲಿ, ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಸ್ವಾಗತಾರ್ಹ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular